Oyo: ಓಯೋ ರೂಮಲ್ಲಿ ಬಾಗಿಲು ಹಾಕೋದು ಮರೆತು ಆಟ ಶುರು ಮಾಡಿದ ಜೋಡಿ – ಮೆಟ್ರೋ ನಿಲ್ದಾಣದಿಂದ ನೋಡಿ ಎಚ್ಚರಿಸಿದ ಹುಡುಗ

Oyo: ಓರೂಮ್‌ನಲ್ಲಿ ಜೋಡಿಯೊಂದು ಬಾಗಿಲು ಹಾಕಿಕೊಳ್ಳುವುದನ್ನು ಮರೆತು ಮೈ ಮರೆತಿದ್ದು, ಇದನ್ನು ಕಂಡ ಮೆಟ್ರೋ ನಿಲ್ದಾಣದಿಂದ ಒಬ್ಬ ವ್ಯಕ್ತಿ ಕೂಗಿ ಎಚ್ಚರಿಸಿದ ಘಟನೆ ನಡೆದಿದೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
View this post on Instagram
ಹೌದು, ಓಯೋ ರೂಮ್‌ಗೆ ತೆರಳಿದ ಜೋಡಿಯೊಂದು ಬಾಗಿಲು ಹಾಕಿಕೊಳ್ಳುವುದನ್ನು ಮರೆತಿದ್ದು, ಇದನ್ನು ಮೆಟ್ರೋ ನಿಲ್ದಾಣದಿಂದ ಗಮನಿಸಿದ ವ್ಯಕ್ತಿಯೊಬ್ಬ ‘ಓಯ್, ಗೇಟ್ ಲಗಾ ಲೇ’ (ಬಾಗಿಲು ಹಾಕಿಕೊ) ಎಂದು ಜೋರಾಗಿ ಕೂಗಿ ಎಚ್ಚರಿಸಿದ್ದಾನೆ. ಈ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ‘mahiiii._.17′ ಖಾತೆಯಲ್ಲಿ ಪೋಸ್ಟ್ ಆಗಿದ್ದು, 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 2 ಸಾವಿರಕ್ಕೂ ಅಧಿಕ ಕಾಮೆಂಟ್‌ಗಳೊಂದಿಗೆ ವೈರಲ್ ಆಗಿದೆ.
ಅಂದಹಾಗೆ ಓಯೋ ದಿ ಎಲೈಟ್ ಸ್ಟೇ’ ಹೆಸರಿನ ಹೋಟೆಲ್ ಮೆಟ್ರೋ ನಿಲ್ದಾಣದ ಪಕ್ಕದಲ್ಲಿದೆ. ರೂಮ್‌ನ ಬಾಗಿಲು ತೆರೆದಿದ್ದರಿಂದ, ಕೋಣೆಯ ಒಳಗಿನ ದೃಶ್ಯಗಳು ಮೆಟ್ರೋ ಪ್ರಯಾಣಿಕರಿಗೆ ಕಾಣಿಸುತ್ತಿದ್ದವು. ಆಗ ಮೆಟ್ರೋದಿಂದ ಕೂಗಿದ ಧ್ವನಿ ಕೇಳಿ, ಯುವಕ ನಗುತ್ತಾ ಓಡಿ ಬಂದು ಬಾಗಿಲು ಹಾಕಿಕೊಂಡಿದ್ದಾನೆ. ಈ ವಿಡಿಯೋವನ್ನು ರೆಕಾರ್ಡ್ ಮಾಡಿದ ಯುವತಿಯ ನಗುವಿನ ಶಬ್ದವೂ ಕೇಳಿಸುತ್ತಿದೆ.
Comments are closed.