Banu Mushtaq: ಅಂತರರಾಷ್ಟ್ರೀಯ ‘ಬೂಕರ್ ಪ್ರಶಸ್ತಿ’ ಶಾರ್ಟ್‌ಲಿಸ್ಟ್ ನಲ್ಲಿ ಬಾನು ಮುಷ್ತಾಕ್ ಪುಸ್ತಕ ‘ಹಾರ್ಟ್‌ ಲ್ಯಾಂಪ್‌’ – ಮತ್ತೆ ಕನ್ನಡದ ಕಡೆಗೆ ತಿರುಗಿ ನೋಡಿದ ಜಗತ್ತು

Share the Article

Banu Mushtaq: ಇತ್ತೀಚಿಗೆ ಕನ್ನಡ ಲೇಖಕಿ ಬಾನು ಮುಷ್ತಾಕ್ ಅವರ ಕಥಾ ಸಂಕಲನ ‘ಹಾರ್ಟ್ ಲ್ಯಾಂಪ್’ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿ ಕನ್ನಡಿಗರೆಲ್ಲರೂ ಹೆಮ್ಮೆ ಪಡುವಂತೆ ಆಗಿತ್ತು. ಅಲ್ಲದೆ ಈ ಪ್ರಶಸ್ತಿಗೆ ಆಯ್ಕೆಯಾದ ಮೊದಲ ಕನ್ನಡ ಭಾಷಾ ಪುಸ್ತಕ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಇತಿಹಾಸ ನಿರ್ಮಿಸಿತ್ತು. ಇದೀಗ ಈ ಬೆನ್ನಲ್ಲೇ ಮತ್ತೊಂದು ಸಂತೋಷದ ವಿಚಾರ ಹೊರ ಬಿದ್ದಿದ್ದು ಮಂಗಳವಾರ (ಏಪ್ರಿಲ್ 8, 2025) ಘೋಷಿಸಲಾದ ಈ ವರ್ಷದ ಕಿರುಪಟ್ಟಿಯಲ್ಲಿ ಕನ್ನಡದಿಂದ ಇಂಗ್ಲೀಷ್‌ಗೆ ಅನುವಾದಿಸಿದ ಪುಸ್ತಕ ‘ಹಾರ್ಟ್ ಲ್ಯಾಂಪ್ ’ ಕೂಡ ಸೇರ್ಪಡೆಯಾಗಿದೆ.

ಹೌದು, ದೀಪಾ ಭಸ್ತಿ ಅನುವಾದಿಸಿರುವ ‘ಹಾರ್ಟ್ ಲ್ಯಾಂಪ್’ 1990 ಮತ್ತು 2023 ರ ನಡುವೆ ಬಾನು ಮುಷ್ತಾಕ್ ಬರೆದ 12 ಸಣ್ಣ ಕಥೆಗಳ ಸಂಗ್ರಹವಾಗಿದ್ದು ಈ ಪುಸ್ತಕ ಬೂಕರ್ ಪ್ರಶಸ್ತಿ ಕಿರುಪಟ್ಟಿಯಲ್ಲಿದೆ. ಕನ್ನಡ ಭಾಷೆಯ ಅನುವಾದಿತ ಪುಸ್ತಕ ಹೊಸ ಇತಿಹಾಸ ಸೃಷ್ಟಿಸಿದೆ. ಅಂದ ಹಾಗೆ ಈ ಪ್ರಶಸ್ತಿಯು 50 ಲಕ್ಷಕ್ಕೂ ಹೆಚ್ಚು ನಗದು ಬಹುಮಾನವನ್ನು ಹೊಂದಿದೆ ಎಂಬುದು ಇನ್ನು ಹೆಮ್ಮೆಯ ಸಂಗತಿ.

ದೀಪಾ ಬಸ್ತಿ ಅನುವಾದಿಸಿರುವ ಹಾರ್ಟ್ ಲ್ಯಾಂಪ್ ಪುಸ್ತಕವು 1990 ಮತ್ತು 2023ರ ನಡುವೆ ಬಾನು ಮುಷ್ತಾಕ್ ಅವರ 12 ಸಣ್ಣ ಕಥೆಗಳ ಸಂಗ್ರಹವಾಗಿದೆ. ವಿಶ್ವಾದ್ಯಂತ ಆರು ಕೃತಿಗಳಿಗೆ ಅಖೈರುಗೊಳಿಸಲಾದ ಪ್ರಶಸ್ತಿಗೆ ಬಾನು ಮುಷ್ತಾಕ್ ಅವರ ಕೃತಿಯು ಕುಟುಂಬ ಮತ್ತು ಸಮುದಾಯದ ಉದ್ವಿಗ್ನತೆಗಳ ಭಾವಚಿತ್ರಗಳನ್ನು ಸೆರೆಹಿಡಿಯುವ “ಚಮತ್ಕಾರಿ, ಎದ್ದುಕಾಣುವ, ಆಡುಮಾತಿನ, ಹೃದಯಸ್ಪರ್ಶಿ ಮತ್ತು ರೋಮಾಂಚನಕಾರಿ” ಶೈಲಿಯನ್ನು ಹೊಂದಿದೆ.

Comments are closed.