Bengaluru : 2nd PUC ಪರೀಕ್ಷೆಯಲ್ಲಿ ಅಪ್ಪು ಬಾಡಿಗಾರ್ಡ್ ಮಗಳ ಸಾಧನೆ – ಇಲ್ಲ ಯಜಮಾನರಿಂದ ಎಂದ ಛಲಪತಿ

Share the Article

Bengaluru : ಮೊನ್ನೆಯಷ್ಟೇ ದ್ವಿತೀಯ ಪಿಯುಸಿ ಪರೀಕ್ಷೆಯ ಪಲಿತಾಂಶ ಪ್ರಕಟಗೊಂಡಿದ್ದು, ಈ ಪರೀಕ್ಷೆಯಲ್ಲಿ ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಪರ್ಸನಲ್ ಬಾಡಿಗಾರ್ಡ್ ಆಗಿದ್ದ ಛಲಪತಿ ಅವರ ಪುತ್ರಿ ಅಮೂಲ್ಯ ಸಹ ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆಗಿದ್ದಾರೆ.

ಮಾಧ್ಯಮದ ಜೊತೆ ಮಾತಾಡಿರುವ ಛಲಪತಿ, ‘ನನ್ನ ಮಗಳ ಸಾಧನೆಗೆ ಪುನೀತ್ ರಾಜ್​ಕುಮಾರ್ ಅವರ ಆಶೀರ್ವಾದವೂ ಕಾರಣ. ಮಗಳು ಪ್ರಾಥಮಿಕ ಶಾಲೆಯಲ್ಲಿ ಇದ್ದಾಗಿನಿಂದಲೂ ಅವರೇ ಓದಿಸುತ್ತಿದ್ದರು. ನನ್ನ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಅವರೇ ಹೊತ್ತಿದ್ದರು’ ಎಂದಿದ್ದಾರೆ. ಚಲಪತಿ ಪುತ್ರಿ ಅಮೂಲ್ಯ ಮಾತನಾಡಿ, ‘ನಮ್ಮನ್ನು ಓದಿಸಿದ್ದ ಪುನೀತ್ ಅವರು, ಅವರ ಸಹಾಯಕ್ಕೆ ಓದಿನ ಮೂಲಕ ಧನ್ಯವಾದ ಹೇಳಿದ್ದೇನೆ’ ಎಂದಿದ್ದಾರೆ.

ಅಮೂಲ್ಯ ಅವರು ಕನ್ನಡ 98, ಇಂಗ್ಲೀಷ್‌ನಲ್ಲಿ 90 ಮಾರ್ಕ್ಸ್, ಎಕನಾಮಿಕ್ಸ್‌ನಲ್ಲಿ 97, ಬಿಸಿನೆಸ್ ಸ್ಟಡೀಸ್‌ನಲ್ಲಿ 90, ಅಕೌಂಟೆನ್ಸಿನಲ್ಲಿ 96, ಸ್ಟಾಟಿಸ್ಟಿಕ್ಸ್‌ನಲ್ಲಿ 95 ಅಂಕವನ್ನು ಗಳಿಸಿದ್ದಾರೆ. ಮಗಳ ಈ ಸಾಧನೆಗೆ ತಂದೆ ಛಲಪತಿ ಹೆಮ್ಮೆ ಪಟ್ಟಿದ್ದಾರೆ.

Comments are closed.