Bengaluru: ಮತ್ತೊಂದು ದರ ಏರಿಕೆಯ ಶಾಕ್ ಇಲ್ಲಿದೆ!

Share the Article

Bengaluru: ಹಾಲು, ನೀರು, ವಿದ್ಯುತ್ ದರ ಏರಿಕೆಯ ನಡುವೆಯೇ ಪೋಷಕರಿಗೆ ಮತ್ತೊಂದು ದರ ಏರಿಕೆಯ ಶಾಕ್ ಎದುರಾಗಿದೆ.

ಖಾಸಗಿ ಶಾಲೆಗಳ ಫೀಸ್ ಏರಿಕೆ ಮಾಡಲು ತೀರ್ಮಾನಿಸಲಾಗಿದ್ದು ಪೋಷಕರಿಗೆ ಹೆಚ್ಚಿನ ಹೊರೆ ಬೀಳಲಿದೆ. ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು ಶಾಲಾ ಶುಲ್ಕ 15 ರಿಂದ 20 % ಏರಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.

ಈಗಾಗಲೇ ಡೀಸೆಲ್ ದರ ಏರಿಕೆಯಿಂದ ಶಾಲಾ ವಾಹನ ಶುಲ್ಕವೂ ಏರಿಕೆ ಮಾಡಲಾಗಿದ್ದು ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು ಹೆಚ್ಚಿನ ಖರ್ಚು ಮಾಡಬೇಕಿದೆ.

Comments are closed.