Muslim Girl: ಅನ್ಯಕೋಮಿನ ಯುವತಿ ಗೆಳೆಯನ ಜೊತೆ ಬೈಕ್‌ನಲ್ಲಿ ಕುಳಿತಿದ್ದಕ್ಕೆ ಕಿರಿಕ್; ವಿಡಿಯೋ ವೈರಲ್!

Muslim Girl: ಮುಸ್ಲಿಂ ಯುವತಿ ತನ್ನ ಗೆಳೆಯನ ಜೊತೆ ಬೈಕ್ ಮೇಲೆ ಕುಳಿತಿದ್ದಕ್ಕೆ ಪುಂಡರ ಗ್ಯಾಂಗ್ ಕಿರಿಕ್ ಮಾಡಿ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಾಲೇಜು ಯುವತಿ ತನ್ನ ಗೆಳೆಯನ ಬೈಕ್ ಮೇಲೆ ಕುಳಿತಿದ್ದು, ಅಲ್ಲಿಗೆ ಬಂದ ಗ್ಯಾಂಗ್, ಕಾಲೇಜಿಗೆ ಹೋಗೋದು ಬಿಟ್ಟು ಇಲ್ಲಿ ಕೂತಿದ್ಯ, ನಿನ್ನ ಅಪ್ಪ ಅಮ್ಮನ ನಂಬರ್ ಕೊಡು, ಮುಸ್ಲಿಂ ಆಗಿ ಈ ರೀತಿ ಮಾಡ್ತಿದ್ದಯಾ, ಎಂದೆಲ್ಲಾ ಹೇಳಿ ಕಿರಿಕ್ ಮಾಡಿದ್ದಾರೆ. ಯುವತಿಯ ಜೊತೆ ಇದ್ದ ಯುವಕನಿಗೂ ಬೈದು, ಹಲ್ಲೆ ಮಾಡಿದ್ದಾರೆ. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪೊಲೀಸರು ವಿಡಿಯೋ ಮೂಲದ ಬೆನ್ನು ಹತ್ತಿದ್ದಾರೆ. ಹಾಗೂ ತನಿಖೆ ನಡೆಯುತ್ತಿದೆ.
Comments are closed.