Viraj Pet: ಗಡಿಯಾರ ಕಂಬದಿಂದ ಚೌಕಿವರೆಗೆ ಸರ್ವೆ ಕಾರ್ಯ: 9 ರಸ್ತೆಗಳು ಮಂಗಮಾಯ! ಒತ್ತುವರಿ ತೆರವು

Viraj Pet: ವಿರಾಜಪೇಟೆ ಪಟ್ಟಣದ ಟ್ರಾಫಿಕ್(Traffic) ಸಮಸ್ಯೆಯಿಂದ ಬೇಸತ್ತು ಪಟ್ಟಣದ ಸಾರ್ವಜನಿಕರೊಬ್ಬರೂ ಪಟ್ಟಣದ ಗಡಿಯಾರ ಕಂಬದಿಂದ ಚೌಕಿವರೆಗೂ 8 ಅಡಿ ಅಗಲದ 11 ರಸ್ತೆಗಳು ಒತ್ತುವರಿಯಾಗಿದೆ ಎಂದು ವಿರಾಜಪೇಟೆ ಪುರಸಭೆಗೆ ಇತ್ತೀಚೆಗೆ ದೂರು ನೀಡಿದ್ದರು. ಇದಕ್ಕೆ ಪೂರ್ವಕವಾಗಿ ಪುರಸಭೆಯ ಆಡಳಿತ ಮಂಡಳಿ ಸ್ಪಂದಿಸಿ ಕಡತವನ್ನು ಸರ್ವೇ(Survey) ಕಚೇರಿಗೆ ಕಳುಹಿಸಿ ಅರ್ಜಿದಾರರ ಮನವಿಯನ್ನು ಪುರಸ್ಕರಿಸುವಂತೆ ಕೋರಲಾಗಿತ್ತು. ಅದರಂತೆ ಇಂದು ಸರ್ವೇ ಕಾರ್ಯ ಕೈಗೊಂಡ ಇಲಾಖೆ ನೀಲಿ ನಕ್ಷೆಯಲ್ಲಿ(Blue print) ಇರುವಂತೆ ಗಡಿಯಾರ ಕಂಬದದಿಂದ ಚೌಕಿವರೆಗಿನ ಮುಖ್ಯ ರಸ್ತೆಯ ಬಲಬದಿ 11 ಸಾರ್ವಜನಿಕ ರಸ್ತೆಗಳನ್ನು ಸರಕಾರಿ ಭೂ ಮಾಪಕರು ಪತ್ತೆ ಮಾಡಿದ್ದಾರೆ . ಆದರೆ ಹಾಲಿ ಕೇವಲ 2 ರಸ್ತೆಗಳು ಮಾತ್ರ ಇದ್ದು ಉಳಿದ 9 ರಸ್ತೆಗಳು ಮಂಗ ಮಾಯವಾಗಿದೆ.
ಗಡಿಯಾರ ಕಂಬದ ಬಳಿಯಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆ ಮತ್ತು ಕೆ. ಬೋಪಯ್ಯನವರ ಸಿಮೆಂಟ್ ಅಂಗಡಿ ಸಮೀಪ ಹೋಗುವ ರಸ್ತೆ ಮಾತ್ರ ಒತ್ತುವರಿಯಾಗದಿರುವುದು ಸರ್ವೇ ಮೂಲಕ ದೃಢ ಪಟ್ಟಿದೆ. ಉಳಿದ 9 ರಸ್ತೆಗಳು ಮುಂದಿನ ದಿನಗಳಲ್ಲಿ ರಸ್ತೆ ಒತ್ತುವರಿ ತೆರವುಗೊಂಡರೆ ದ್ವಿಚಕ್ರ ಮತ್ತು ತ್ರಿ ಚಕ್ರದ ವಾಹನಗಳು ಈ ರಸ್ತೆಗಳ ಮೂಲಕ ಸಂಚಾರ ಮಾಡಬಹುದಾಗಿದ್ದು ಇದರಿಂದ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಕಡಿಮೆಯಾಗಿ ಟ್ರಾಫಿಕ್ ಸಮಸ್ಯೆ ಕಡಿಮೆ ಯಾಗಲು ಸಹಕಾರಿಯಾಗಲಿದೆ.
ಇದೆ ರೀತಿ ಗಡಿಯಾರ ಕಂಬದಿಂದ ಮೀನುಪೇಟೆ, ಮಲಬಾರ್ ರಸ್ತೆಯವರೆಗೆ ಸರ್ವೇ ಕಾರ್ಯ ನಡೆಸಲು ಯಾರಾದರೂ ದೂರು ನೀಡಿದರೆ ಹಲವು ರಸ್ತೆಗಳು ಒತ್ತುವರಿಯಾಗಿರುವುದ್ದನ್ನು ಪತ್ತೆ ಹಚ್ಚಬಹುದಾಗಿದೆ ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.
Comments are closed.