Bengaluru: ಈ ವರ್ಷ ಫೇಲ್ ಆದ ಅಥವಾ ಮತ್ತೊಮ್ಮೆ 2ನೇ ಮತ್ತು 3ನೇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ತೆರಬೇಕಿಲ್ಲ: ಶಿಕ್ಷಣ ಸಚಿವ

Bengaluru: ಶಿಕ್ಷಣ ಸಚಿವ ಮಧು ಬಂಗಾರಪ್ಪ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಚೇರಿಯಲ್ಲಿ ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು ಈ ವೇಳೆ ಫೇಲಾದ ವಿದ್ಯಾರ್ಥಿಗಳಿಗೆ ಮತ್ತು ಪಾಸಾದರೂ ಕಡಿಮೆ ಅಂಕಗಳನ್ನು ಪಡೆದು ಫಲಿತಾಂಶವನ್ನು ಸುಧಾರಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ.
ಅದೇನೆಂದರೆ 2ನೇ ಮತ್ತು 3ನೇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ತೆರಬೇಕಿಲ್ಲ. ಈ ಸೌಲಭ್ಯವನ್ನು ಕೇವಲ ಈ ವರ್ಷಕ್ಕೆ ಮಾತ್ರ ಸೀಮಿತಗೊಳಿಸಲಾಗಿದ್ದು ಮುಂದಿನ ವರ್ಷ ಎಂದಿನಂತೆ ಪ್ರತಿ ಸಬ್ಜೆಕ್ಟ್ ಗೆ ಇಷ್ಟಿಷ್ಟು ಅಂತ ಶುಲ್ಕ ನಿಗದಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
Comments are closed.