ಮಳೆ ಸೂಚನೆ: ಏಪ್ರಿಲ್ 9ರ ಬುಧವಾರ ಎಲ್ಲೆಲ್ಲಿ ಮಳೆಯಾಗುತ್ತೆ: 15 ಜಿಲ್ಲೆಗಳಲ್ಲಿ ಮಳೆ ಸೂಚನೆ

Share the Article

ಬೆಂಗಳೂರು: ಕರಾವಳಿ ಭಾಗದಲ್ಲಿ ಅಲ್ಲಲ್ಲಿ ಮೇಲೆ ಬೀಳುತ್ತಿದೆ. ಇಂದು (ಏಪ್ರಿಲ್ 9, ಬುಧವಾರ) 15 ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರು ಹವಾಮಾನ ಕೇಂದ್ರದ ವರದಿಯ ಪ್ರಕಾರ, ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಕೆಲವೆಡೆ ಹಗುರದಿಂದ ಕೂಡಿದ ಮಧ್ಯಮ ಮಳೆ ಸೂಚನೆ ಇದೆ.

ಎಲ್ಲೆಡೆ ಅಲ್ಲೆಲ್ಲಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಇಂದಿನಿಂದ (ಏಪ್ರಿಲ್ 9, ಬುಧವಾರ) ಏಪ್ರಿಲ್ 14ರ ಸೋಮವಾರದವರೆಗೆ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರ ಮಾಹಿತಿ ನೀಡಿದೆ.

ಕರ್ನಾಟಕದ ಎಲ್ಲೆಡೆ ತೀವ್ರ ಬಿಸಿಲಿನ ವಾತಾವರಣ ಮುಂದುವರೆದಿದೆ, ಈ ತನಕ ಕೆಲವೇ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಒಟ್ಟಾರೆ ಮಳೆ ಸುರಿದ ಪ್ರದೇಶಗಳಲ್ಲಿ ವಾತಾವರಣದ ಬಿಸಿ ಸ್ವಲ್ಪ ಪ್ರಮಾಣದಲ್ಲಿ ತಗ್ಗಿದೆ. ಏಪ್ರಿಲ್ 8, ಮಂಗಳವಾರ ಬೆಳಗಾವಿಯ ಖಾನಾಪುರದಲ್ಲಿ 4 ಸೆಂಟಿ ಮೀಟ‌ರ್ ಮಳೆಯಾಗಿದೆ. ಉಳಿದಂತೆ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ಬೆಳಗಾವಿ ಜಿಲ್ಲೆಯ ಆಬ್ಲಿ, ರಾಯಚೂರು ಜಿಲ್ಲೆ ಮುದಗಲ್, ಯಲ್ಲಾಪುರ ಹಳಿಯಾಳದಲ್ಲಿ ತಲಾ 1 ಸೆಂಟಿ ಮೀಟರ್ ಮಳೆಯಾಗಿದೆ.

Comments are closed.