ಶಿವಮೊಗ್ಗ: ವೃತ್ತಿ ಜೀವನದ ಕೊನೆ ದಿನ ಲಂಚ ಸ್ವೀಕರಿಸಲು ಹೋಗಿ ಸಿಕ್ಕಿ ಬಿದ್ದ ಅಧಿಕಾರಿ!

Share the Article

ಶಿವಮೊಗ್ಗ: ನಗರದ ಸ್ಮಾರ್ಟ್ ಸಿಟಿ (Smart City) ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರು ತಮ್ಮ ವೃತ್ತಿ ಜೀವನದ ಕೊನೆಯ ದಿನ ಲಂಚ ಸ್ವೀಕರಿಸಲು ಹೋಗಿ ಲೋಕಾಯುಕ್ತ (Lokayukta) ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

ಸ್ಮಾರ್ಟ್ ಸಿಟಿ ಮುಖ್ಯಸ್ಥನಾಗಿದ್ದ ಕೃಷ್ಣಪ್ಪನವರು, ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ಇಂದು ಅಧಿಕಾರ ಹಸ್ತಾಂತರಿಸಿ ನಿವೃತ್ತಿ ಪಡೆಯಬೇಕಿತ್ತು. ಆದರೆ ಕೊನೆಯ ದಿನ ಕೂಡಾ ಅವರ ಲಂಚದ ಆಸೆಯಿಂದ ಅರೆಸ್ಟ್ ಆಗಿದ್ದಾರೆ. ಶಿವಮೊಗ್ಗ ನಗರದಲ್ಲಿ ಟಿವಿ, ಎಲ್‍ಇಡಿ ಪರದೆಗಳನ್ನ ಅಳವಡಿಸುವ ಸಂಬಂಧ ಬಿಲ್ ಮಾಡಲು ಮುಂಬೈ ಮೂಲದ ಕಂಪೆನಿ ಬಳಿ ಅವರು 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಪಡೆಯುವಾಗ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

Comments are closed.