Aadhar app: ಕೇಂದ್ರ ಸರ್ಕಾರದಿಂದ ಹೊಸ ಆಧಾರ್ ಆ್ಯಪ್ ಬಿಡುಗಡೆ

Aadhar app: ಕೇಂದ್ರ ಐಟಿ ಸಚಿವ(IT Minister) ಅಶ್ವಿನಿ ವೈಷ್ಣವ್ ಹೊಸ ಆಧಾರ್ ಆ್ಯಪ್ ಅನಾವರಣಗೊಳಿಸಿದ್ದಾರೆ. ಆ್ಯಪ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತೋರಿಸುವ ವಿಡಿಯೋವನ್ನು ಸಚಿವರು ಹಂಚಿಕೊಂಡಿದ್ದಾರೆ. ಇದು QR ಕೋಡ್(QR Code) ಪರಿಶೀಲನೆ ಮತ್ತು ನೈಜ-ಸಮಯದ ಮುಖ ಗುರುತಿಸುವಿಕೆಯಂತಹ ಫೀಚರ್‌ಗಳನ್ನು ಒಳಗೊಂಡಿದೆ. ಈ ಆ್ಯಪ್‌ನಿಂದಾಗಿ ಭೌತಿಕ ಕಾರ್ಡ್‌ಗಳು ಮತ್ತು ಜೆರಾಕ್ಸ್ ಕಾಪಿಗಳ ಅಗತ್ಯ ಇರುವುದಿಲ್ಲ. ಈ ಆ್ಯಪ್ ಪ್ರಸ್ತುತ ಬೀಟಾ ವರ್ಷನ್‌ನ ಟೆಸ್ಟಿಂಗ್ ಹಂತದಲ್ಲಿದೆ.
4/ No need to hand over Aadhaar photocopy at hotel receptions, shops or during travel. The Aadhaar App is secure and shareable only with the user's consent.
✅100% digital & secure pic.twitter.com/mrbY8M88CB— Ashwini Vaishnaw (@AshwiniVaishnaw) April 8, 2025
ಹೊಸ ಆಧಾರ್ ಅಪ್ಲಿಕೇಶನ್ ವಿಶೇಷತೆ ಏನು?
– ಬಲವಾದ ಗೌಪ್ಯತೆ
– ಆಧಾರ್ ಡೇಟಾದ ದುರುಪಯೋಗ ಮತ್ತು ಸೋರಿಕೆ ತಡೆಯುತ್ತೆ.
– ನಿಮ್ಮ ಆಧಾರ್ ಅನ್ನು ಯಾರಿಂದಲೂ ಫೋಟೋಶಾಪ್ ಮಾಡುವಂತಿಲ್ಲ.
ಕೇಂದ್ರ ಸರ್ಕಾರ ಜೀವನ ಸುಲಭತೆಯನ್ನು ಮತ್ತಷ್ಟು ಸುಧಾರಿಸುವತ್ತ ಪ್ರಾಥಮಿಕ ಗಮನವನ್ನು ಹರಿಸಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಆಧಾರ್ ಮುಖ ದೃಢೀಕರಣದ ಉದಾಹರಣೆಯನ್ನು ಮತ್ತು ಅದು ಹೇಗೆ ಸಕ್ರಿಯಗೊಳಿಸುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ.
Comments are closed.