Bengaluru : ಪುತ್ತೂರು ಮೂಲದ ಮುಸ್ಲಿಂ ವಿದ್ಯಾರ್ಥಿನಿಗೆ ಸಂಸ್ಕೃತದಲ್ಲಿ 96 ಅಂಕ!!

Share the Article

Bengaluru : ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಂಸ್ಕೃತದಲ್ಲಿ 100 ಕ್ಕೆ 96 ಅಂಕಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

ಬೆಂಗಳೂರಿನ ಆಶಿಫಾ ಹುಸೈನ್ ಎಂಬ ವಿದ್ಯಾರ್ಥಿನಿ ಈ ಸಾಧನೆಯನ್ನು ಮಾಡಿದ್ದಾರೆ. ಅವರು ಬೆಂಗಳೂರಿನ ನಾರಾಯಣ ಟೆಕ್ನೋ ಸ್ಕೂಲ್‌ನಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ ಓದಿದ್ದು, ದ್ವಿತೀಯ ಪಿಯುಸಿಯಲ್ಲಿ ಒಟ್ಟು 563 ಅಂಕ ಗಳಿಸಿದ್ದಾಳೆ. ಇವರು ಸಂಸ್ಕೃತವನ್ನು ದ್ವಿತೀಯ ಭಾಷೆಯಾಗಿ ಆಯ್ಕೆ ಮಾಡಿಕೊಂಡಿದ್ದರು.

ಅಂದಹಾಗೆ ಆಶಿಫಾ ಮೂಲತಃ ಪುತ್ತೂರು ತಾಲೂಕಿನ ಕಾವು ಅಮ್ಚಿನಡ್ಕ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ಕೇಂದ್ರ ಸಂಪರ್ಕ ಇಲಾಖೆಯಲ್ಲಿ ಅಧಿಕಾರಿಯಾಗಿರುವ ಖೈರುನ್ನೀಸಾ ಮತ್ತು ಜಾಕಿರ್ ದಂಪತಿಯ ಮಗಳಾಗಿದ್ದಾಳೆ.

Comments are closed.