Food: ಆಹಾರ ಪರವಾನಗಿ ಪಡೆದಿರುವ ತಯಾರಕರು ವಾರ್ಷಿಕ ವಹಿವಾಟಿನ ವಿವರ ಸಲ್ಲಿಸಲು ಸೂಚನೆ

Food: ಆಹಾರ (Food) ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಆಹಾರ ಪರವಾನಗಿ ಪಡೆದಿರುವ ತಯಾರಕರು/ರೀ-ಪ್ಯಾಕರ್/ ರೀ-ಲೇಬರ್ ಪ್ರತಿ ವರ್ಷ ತಮ್ಮ ವಾರ್ಷಿಕ ವಹಿವಾಟಿನ ವಿವರವನ್ನು 2025 ರ ಮೇ-31 ರ ಕಾಲಮಿತಿಯೊಳಗೆ https:\\foscos.fssai.gov.in ವೆಬ್‍ಸೈಟ್‍ನಲ್ಲಿ ತಪ್ಪದೇ ಸಲ್ಲಿಸುವುದು. ತಪ್ಪಿದ್ದಲ್ಲಿ ವಾರ್ಷಿಕವಾಗಿ ಕಾಯ್ದೆಯಡಿ ನಿಗಧಿಯಾಗುವ ದಂಡವನ್ನು (ರೂ.15000) ಕಡ್ಡಾಯವಾಗಿ ಪಾವತಿಸಿದ ನಂತರವೇ ಪರವಾನಗಿ ನವೀಕರಿಸಲು ಅವಕಾಶವಿರುತ್ತದೆ.
ತಯಾರಕರು/ರೀ-ಪ್ಯಾಕರ್/ರೀ-ಲೇಬರ್‍ದಾರರು ತಮ್ಮ ಆಹಾರ ಪದಾರ್ಥಗಳ ವಿಶ್ಲೇಷಣಾ ವರದಿಯನ್ನು ಪ್ರತಿ 06 ತಿಂಗಳಿಗೊಮ್ಮ ಎನ್‍ಎಬಿಎಲ್ ಅಕ್ರಿಡಿಯೇಟೆಡ್ ಎಫ್‍ಎಸ್‍ಎಸ್‍ಎಐ ನೋಂದಾಯಿತ ಪ್ರಯೋಗಾಲಯದಲ್ಲಿ ವಿಶ್ಲೇಷಿಸಿ ವರದಿಯನ್ನು ಅಧಿಕೃತ ಅಂರ್ತಜಾಲ ತಾಣದಲ್ಲಿ ತಮ್ಮ ತಮ್ಮ ಲಾಗಿನ್‍ನಲ್ಲಿ ನಮೂದಿಸುವುದು ಕಡ್ಡಾಯವಾಗಿದೆ.
ಈ ರೀತಿಯಲ್ಲಿ ವಾರ್ಷಿಕ ವಹಿವಾಟಿನ ವಿವರವನ್ನು ಹಾಗೂ ಪ್ರಯೋಗಾಲಯದ ವಿಶ್ಲೇಷಿಸಿ ವರದಿಯನ್ನು ಸಲ್ಲಿಸಲು ವಿಫಲವಾದಲ್ಲಿ ಮುಂದಿನ ಆಗುಹೋಗುಗಳಿಗೆ ಸಂಬಂಧಿಸಿದ ತಯಾರಕರು/ರೀ-ಪ್ಯಾಕರ್/ರೀ-ಲೇಬರ್ ಆಹಾರ ಉದ್ಧಿಮೆದಾರರು ಜವಾಬ್ದಾರರಾಗುತ್ತಾರೆ.
ಆಹಾರ ನೋಂದಣಿ/ ಪರವಾನಗಿ ಪಡೆಯದೇ ವ್ಯಾಪಾರ ವಹಿವಾಟು ನಡೆಸುವವರು ತಕ್ಷಣದಲ್ಲೇ ಇಲಾಖೆಯಿಂದ ಆಹಾರ ನೋಂದಣಿ/ ಪರವಾನಗಿಯನ್ನು ಪಡೆದುಕೊಳ್ಳುವುದು, ತಪ್ಪಿದಲ್ಲಿ ಕಾಯ್ದೆಯಡಿ ನೋಟಿಸ್ ಮತ್ತು ದಂಡವನ್ನು ವಿಧಿಸಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಂಕಿತ ಅಧಿಕಾರಿ ಡಾ.ಇ.ಅನಿಲ್ ಧಾವನ್ ಅವರು ತಿಳಿಸಿದ್ದಾರೆ.
Comments are closed.