Viral Video : ನಿಮ್ಮನ್ನು ತುಂಡು ತುಂಡಾಗಿ ಕತ್ತರಿಸುತ್ತೇನೆ – ರೈಲಿನಲ್ಲಿ ಅಧಿಕಾರಿಗಳಿಗೆ ಬುರ್ಖಾದಾರಿ ಮಹಿಳೆ ಬೆದರಿಕೆ

Share the Article

Viral Video : ಭಾರತೀಯ ರೈಲ್ವೆಯ ಎಸಿ ಕೋಚ್‌ನಲ್ಲಿ ಬುರ್ಖಾ ಧರಿಸಿದ ಮಹಿಳೆಯೊಬ್ಬರು ಗಲಾಟೆ ಮಾಡಿ ಅಧಿಕಾರಿಗೆ ನಿಮ್ಮನ್ನು ತುಂಡು ತುಂಡಾಗಿ ಕತ್ತರಿಸಿ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ. ಸದ್ಯ ಆಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ (Viral Video) ಆಗಿದೆ.

ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಮತ್ತು ಇನ್ನೊಬ್ಬ ಪ್ರಯಾಣಿಕರ ಕಾಯ್ದಿರಿಸಿದ ಸೀಟನ್ನು ಬಲವಂತವಾಗಿ ಆಕ್ರಮಿಸಿಕೊಂಡಿದ್ದ ಮಹಿಳೆಯ ಬಳಿ ರೈಲ್ವೆ ಅಧಿಕಾರಿಗಳು ಪ್ರಶ್ನೆ ಮಾಡಿದ್ದಕ್ಕೆ ಮಹಿಳೆ ಕೂಗಾಡಿದ್ದಾಳೆ. ವೈರಲ್ ಆಗಿರುವ ವಿಡಿಯೋದಲ್ಲಿ ಆರ್‌ಪಿಎಫ್ ಅಧಿಕಾರಿಯೊಬ್ಬರು, “ಮೇಡಂ, ದಯವಿಟ್ಟು ನಿಮ್ಮ ಟಿಕೆಟ್ ತೋರಿಸಿ. ಇದು ನಿಮ್ಮ ಬರ್ತ್ ಅಲ್ಲ” ಎಂದು ಹೇಳುವುದನ್ನು ಕೇಳಬಹುದು.

ಆಗ ಆ ಮಹಿಳೆ ಕೋಪದಿಂದ, “ಹೋಗಿ ಪ್ರಧಾನಿಯವರನ್ನು ನನ್ನ ಬಗ್ಗೆ ಕೇಳಿ. ನಾನು ನನ್ನ ಟಿಕೆಟ್ ತೋರಿಸುವುದಿಲ್ಲ!” ಎಂದು ಉತ್ತರಿಸಿದ್ದಾಳೆ.. ಸಹ ಪ್ರಯಾಣಿಕನೊಬ್ಬ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಆಗ ಮಹಿಳೆ ಆತನಿಗೆ ಬೆದರಿಕೆ ಹಾಕಿ ನೀನು ಹೆಚ್ಚು ಮಾತನಾಡಿದರೆ ನಾನು ನಿನ್ನನ್ನು ತುಂಡು ತುಂಡಾಗಿ ಕತ್ತರಿಸುತ್ತೇನೆ ಎಂದು ಹೇಳಿದ್ದಾಳೆ.

ಇನ್ನು ಮಹಿಳೆಯ ಗಲಾಟೆ ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿದೆ. ರೈಲ್ವೆ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದಾಗ ಮಹಿಳೆ ಕೂಗಾಡುವುದು, ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸುತ್ತಿರುವುದು ಕಂಡು ಬಂದಿದೆ. ಘಟನೆಯ ಕುರಿತು ರೈಲ್ವೆ ಅಧಿಕಾರಿಗಳು ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

Comments are closed.