Hiriyadka: ಸಹೋದರಿಯರು ನಾಪತ್ತೆ, ಪ್ರಕರಣ ದಾಖಲು!

Hiriyadka: ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಸಹೋದರಿಯರಾದ ಮಂಜುಳಾ (24) ಮತ್ತು ಮಲ್ಲಿಕಾ (18) ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿದೆ.
ಎ.3 ರಂದು ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬರದೆ ನಾಪತ್ತೆಯಾಗಿರುವ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿರುವ ಕುರಿತು ವರದಿಯಾಗಿದೆ.
ಮಂಜುಳಾ ಎಣ್ಣೆಗಪ್ಪು ಮೈಬಣ್ಣ, ಸಾಧಾರಣ ಶರೀರ, ಕನ್ನಡ ತುಳು ಭಾಷೆ ಮಾತನಾಡುತ್ತಾರೆ. ವಿವಾಹಿತೆಯಾಗಿದ್ದು, ಎರಡು ವರ್ಷಗಳಿಂದ ತವರು ಮನೆಯಲ್ಲಿದ್ದರು. ಮಲ್ಲಿಕಾ ಎಣ್ಣೆಗಪ್ಪು ಮೈಬಣ್ಣ, ಸಾಧಾರಣ ಶರೀರ, ಕನ್ನಡ ತುಳು ಭಾಷೆ ಮಾತನಾಡುತ್ತಾರೆ.
ಇವರ ಕುರಿತು ತಿಳಿದು ಬಂದಲ್ಲಿ ಹಿರಿಯಡ್ಕ ಠಾಣೆಯನ್ನು ಸಂಪರ್ಕಿಸಲು ಹೇಳಲಾಗಿದೆ.
Comments are closed.