Mamata Banerjee: ನನ್ನ ಗುಂಡಿಕ್ಕಿ ಕೊಂದರೂ ಪಶ್ಚಿಮ ಬಂಗಾಳದಲ್ಲಿ ‘ವಕ್ಫ್ ಮಸೂದೆ’ ಜಾರಿ ಮಾಡಲ್ಲ – ಮಮತಾ ಬ್ಯಾನರ್ಜಿ ಹೇಳಿಕೆ

Mamata Banerjee: ಹಲವು ವಿವಾದ ಹಾಗೂ ವಿರೋಧಗಳ ನಡುವೆ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆಯಾಗಿ, ಬಹುಮತಗಳಿಂದ ಅಂಗೀಕಾರ ಕೂಡ ಆಗಿದೆ. ಅದರೀಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅದನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ ಎಂದು ಘೋಷಿಸಿದ್ದಾರೆ.
ಕೋಲ್ಕತ್ತಾದಲ್ಲಿ ಬುಧವಾರ ಜೈನ ಸಮುದಾಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನನ್ನ ಆಸ್ತಿಯನ್ನು ತೆಗೆದುಕೊಳ್ಳುವ ಹಕ್ಕು ಯಾರಿಗೂ ಇಲ್ಲದಿದ್ದರೆ, ಇನ್ನೊಬ್ಬರ ಆಸ್ತಿಯನ್ನು ತೆಗೆದುಕೊಳ್ಳಲು ನಾನು ಹೇಗೆ ಅನುಮತಿಸಲಿ? ನಾವು 30% (ಮುಸ್ಲಿಮರನ್ನು) ಜೊತೆಯಲ್ಲಿ ಕರೆದೊಯ್ಯಬೇಕು. ನೆನಪಿಡಿ, ದೀದಿ ನಿಮ್ಮ ಆಸ್ತಿಯನ್ನು ರಕ್ಷಿಸುತ್ತಾರೆ. ನನ್ನನ್ನು ಗುಂಡಿಕ್ಕಿ ಕೊಂದರು ಪರವಾಗಿಲ್ಲ ಪಶ್ಚಿಮ ಬಂಗಾಳದಲ್ಲಿ ವಖ್ಫ್ ಮಸೂದೆ ಜಾರಿ ಮಾಡಲ್ಲ ಎಂದು ಮಮತಾ ಹೇಳಿದ್ದಾರೆ.
Comments are closed.