Packed Fruit juice: ಪ್ಯಾಕ್ ಮಾಡಿದ ಹಣ್ಣಿನ ರಸದ ಸೇವನೆಯಿಂದ ತೂಕ ಹೆಚ್ಚಾಗಬಹುದು: ವೈದ್ಯರು

Packed Fruit juice: ದಿನದಿಂದ ದಿನಕ್ಕೆ ಬಿಸಿಲ(Hot) ಬೇಗೆ ಹೆಚ್ಚುತ್ತಲೇ ಇದೆ. ಎಲ್ಲಾದರೂ ತಂಪು ಪಾನಿಯ(Cold Juice) ಸಿಕ್ಕರೆ ಸಾಕು ಅನ್ನುವಷ್ಟು ಧಗೆ. ಮನೆಯಲ್ಲಿ ಹಣ್ಣು ತಂದು ಜ್ಯೂಸ್ ಮಾಡಿ ಕುಡಿಯುವಷ್ಟು ಯಾರಿಗೂ ಪುರುಸೋತ್ತು ಇಲ್ಲ. ಅಷ್ಟೆಲ್ಲಾ ಕಷ್ಟ ಪಡುವ ಪ್ರಮೇಯವೇ ಇಲ್ಲ. ಬಣ್ಣ ಬಣ್ಣದ ಪ್ಯಾಕೇಟ್ಗಳಲ್ಲಿ ವಿವಿಧ ಹಣ್ಣುಗಳ ರಸವನ್ನು ತುಂಬಿ ಮಾರಲಾಗುತ್ತದೆ. ದುಡ್ಡು ಕೊಟ್ಟರೆ ಸಾಕು ಫ್ರೆಶ್ ಹಣ್ಣಿನ ಜ್ಯೂಸ್ ನಿಮ್ಮ ಕೈ ಸೇರುತ್ತೆ. ಅದರಲ್ಲೂ ಯುವಕರಂತು ಖುಷಿ ಖುಷಿಯಿಂದ ಇದನ್ನು ಕುಡಿಯುತ್ತಿದ್ದಾರೆ. ಆದರೆ ಇದೀಗ ವೈದ್ಯಲೋಕ(Medical) ಬೆಚ್ಚಿ ಬೀಳಿಸುವ ಎಚ್ಚರಿಕೆಯನ್ನು ನೀಡಿದೆ.

ಪ್ಯಾಕ್ ಮಾಡಿದ ಹಣ್ಣಿನ ರಸವನ್ನು(Fruit Juice) ಕುಡಿಯುವುದರಿಂದ ತೂಕ ಹೆಚ್ಚಾಗಬಹುದು(Weight) ಎಂದು ದೆಹಲಿಯ(Delhi) ಸಿಕೆ ಬಿರ್ಲಾ ಆಸ್ಪತ್ರೆಯ ಮಿನಿಮಲ್ ಆಕ್ಸೆಸ್, ಜಿಐ ಮತ್ತು ಬೇರಿಯಾಟ್ರಿಕ್ ಸರ್ಜರಿಯ ನಿರ್ದೇಶಕ ಡಾ.ಸುಲ್ವಿಂದರ್ ಸಿಂಗ್ ಸಗ್ಗು ಹೇಳಿದ್ದಾರೆ. ಇದರ ಸೇವನೆಯು ಇನ್ಸುಲಿನ್ ಪ್ರತಿರೋಧ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅವರು ತಿಳಿಸಿದರು. ವೈದ್ಯರ ಪ್ರಕಾರ, ಅವುಗಳನ್ನು ತಯಾರಿಸಲು ಬಳಸುವ ಪದಾರ್ಥಗಳು ಪ್ರಯೋಜನಕಾರಿ ಕಿಣ್ವಗಳನ್ನು ನಾಶಮಾಡುತ್ತವೆ.
Comments are closed.