Nashik: 7- 10ನೇ ತರಗತಿ ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಕಾಂಡೋಮ್ – ಬೆಚ್ಚಿಬಿದ್ದ ಶಿಕ್ಷಕರು

Nashik: ಕಾಲ ಬದಲಾದಂತೆ ವಿದ್ಯಾರ್ಥಿಗಳು ಕೂಡ ತಮ್ಮ ಕಲಿಕೆಯನ್ನು ಬಿಟ್ಟು ಇತರ ಚಟುವಟಿಕೆಗಳತ್ತ ಗಮನ ಕೊಡುತ್ತಿದ್ದಾರೆ. ಪೋಷಕರಿಗೆ ತಿಳಿಯದಂತೆ ತಾವು ಯಾವುದೋ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಅಂತಯೇ ಇದೀಗ ಅಚ್ಚರಿ ಎಂಬಂತೆ ಏಳರಿಂದ 10ನೇ ತರಗತಿ ವಿದ್ಯಾರ್ಥಿಗಳ ಬ್ಯಾಂಕ್ ನಲ್ಲಿ ಕಾಂಡಮ್ ಮತ್ತು ಚಾಕುಗಳು ಪತ್ತೆಯ
https://x.com/i/status/1909533681271947651
ಹೌದು, ನಾಸಿಕ್‌ನಲ್ಲಿ ಈ ಆಘಾತಕಾರಿ ಘಟನೆ (Shocking News) ಬೆಳಕಿಗೆ ಬಂದಿದೆ. ಘೋಟಿಯ ಶಾಲೆಯೊಂದರಲ್ಲಿ 7ರಿಂದ 10ನೇ ತರಗತಿಯಲ್ಲಿ ಓದುವ ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಕಾಂಡೋಮ್ ಪ್ಯಾಕೆಟ್‌ಗಳು, ಚಾಕುಗಳು, ಇಸ್ಪೀಟ್ ಎಲೆಗಳು ಮತ್ತು ಇತರ ಹಲವು ಆಕ್ಷೇಪಾರ್ಹ ವಸ್ತುಗಳು ಕಂಡುಬಂದಿವೆ. ಇದು ಪೋಷಕರಿಂದ ಹಿಡಿದು ವೃದ್ಧರವರೆಗೆ ಎಲ್ಲರಲ್ಲೂ ಆತಂಕ ಮೂಡಿಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಶಾಲೆಯ ಉಪ ಪ್ರಾಂಶುಪಾಲರು, ತಪಾಸಣೆಯ ಸಮಯದಲ್ಲಿ ಈ ವಸ್ತುಗಳು ಕಂಡುಬಂದಿವೆ ಎಂದು ಹೇಳಿದ್ದಾರೆ. ‘ಮಕ್ಕಳ ಬ್ಯಾಗ್‌ಪ್ಯಾಕ್‌ಗಳಲ್ಲಿ ಕಂಡುಬಂದ ಆಕ್ಷೇಪಾರ್ಹ ವಸ್ತುಗಳು ಒಂದೇ ಬಾರಿಗೆ ಕಂಡುಬಂದಿಲ್ಲ. ಕಳೆದ ಹಲವು ದಿನಗಳಿಂದ ವಿವಿಧ ವಿದ್ಯಾರ್ಥಿಗಳ ಬ್ಯಾಗ್‌ಗಳಲ್ಲಿ ವಿಭಿನ್ನ ವಸ್ತುಗಳು ಕಂಡುಬಂದಿವೆ. ವಿದ್ಯಾರ್ಥಿಗಳು ಅಪರಾಧ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದನ್ನು ತಡೆಯಲು, ನಾವು ಪ್ರತಿದಿನ ಅವರ ಬ್ಯಾಗ್‌ಗಳನ್ನು ಪರಿಶೀಲಿಸುತ್ತೇವೆ’ ಎಂದು ಶಿಕ್ಷಕರು ಹೇಳಿದ್ದಾರೆ.
Comments are closed.