Madikeri: ಬಿಜೆಪಿ ಜನಾಕ್ರೋಶ ಯಾತ್ರೆ – ಹಿಂದೂ ವಿರೋಧಿ ಸಕಾ೯ರದ ಧೋರಣೆ ವಿರುದ್ದ ಬಿಜೆಪಿ ಆಕ್ರೋಶ

Share the Article

Madikeri: ಖಾಸಗಿ ಬಸ್ ಸ್ಟಾಂಡ್ನಲ್ಲಿ(Bus stand) ಬಿಜೆಪಿ ಜನಕ್ರೋಶ ಸಮಾವೇಶದಲ್ಲಿ ರಾಜ್ಯಧ್ಯಕ್ಷರು ಮಾತನಾಡಿ, ಹಿಂದೂಗಳನ್ನು ಶೋಷಿಸುವ ಹುನ್ನಾರ ಸಕಾ೯ರದ ಅನೇಕ ತೀಮಾ೯ನಗಳ ಹಿಂದಿದೆ. ಮುಸಲ್ಮಾನರ(Muslim) ಓಲೈಕೆಗೆ ಕಾಂಗ್ರೆಸ್(Congress) ಮುಂದಾಗಿದೆ. ಬಿಜೆಪಿ(BJP) ಮುಸಲ್ಮಾನರ ವಿರೋಧಿಯಲ್ಲ. ಕಾಶ್ಮೀರದಲ್ಲಿ ಮುಸಲ್ಮಾನರಿಗೆ ನ್ಯಾಯ ದೊರಕಿಸುವ ಕಾಯ೯ಕ್ಕೆ ಕೇಂದ್ರ ಸಕಾ೯ರ(Central Govt) ಮುಂದಾಗಿತ್ತು. ದೇಶದ್ರೋಹಿಗಳನ್ನು ವಿರೋಧಿಸುವ ಪಕ್ಷ ಬಿಜೆಪಿಯಾಗಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದವರಿಗೆ ಸಿದ್ದರಾಮಯ್ಯ ರಕ್ಷಣೆ ನೀಡುತ್ತಾರೆ.

ಪರಿಶಿಷ್ಟ ಜಾತಿ – ಪಂಗಡಕ್ಕೆ ಮೀಸಲಿಟ್ಟ ಅನುದಾನವನ್ನು ಸಕಾ೯ರ ವಿನಿಯೋಗ ಮಾಡದೇ ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ಪಾಲಿಗೆ ಕನಾ೯ಟಕದ ಕಾಂಗ್ರೆಸ್ ಸಕಾ೯ರ ಎಟಿಎಂನಂತಾಗಿದೆ ಎಂದು ವಿಜಯೇಂದ್ರ ಇದೆ ಸಂದರ್ಭ ಆರೋಪಿಸಿದರು. ವಿನಯ್ ಸೋಮಯ್ಯ ಸಾವಿಗೆ ಸ್ಥಳೀಯ ಶಾಸಕರೇ ಕಾರಣ, ಶೌಚಾಲಯ ಸರಿಪಡಿಸಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೇಳಿದ್ದೇ ತಪ್ಪೇ?

ಪೊಲೀಸರ ಮೂಲಕ ಸ್ಥಳೀಯ ಶಾಸಕರು ವಿನಯ್ ಸೋಮಯ್ಯಗೆ ನಿರಂತರ ಕಿರುಕುಳ ನೀಡಿ ಬಿಜೆಪಿಯ ಅಮಾಯಕ ಕಾಯ೯ಕತ೯ನ ಸಾವಿಗೆ ಕಾರಣವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂಣ೯ ಹದಗೆಟ್ಟಿದೆ. ರಾಜ್ಯದಲ್ಲೀಗ ಅಯೋಗ್ಯ ಸಕಾ೯ರ ಅಧಿಕಾರದಲ್ಲಿದೆ. ಭ್ರಷ್ಟ ರಾಜ್ಯ ಸಕಾ೯ರಕ್ಕೆ ತಕ್ಕ ಪಾಠ ಕಲಿಸಲು ಬಿಜೆಪಿ ಜನಾಕ್ರೋಶ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಅಯೋಗ್ಯ, ಜನವಿರೋಧಿ ಕಾಂಗ್ರೆಸ್ ಸಕಾ೯ರಕ್ಕೆ ತಕ್ಕ ಪಾಠ ಕಲಿಸಲು ಜನಾಕ್ರೋಶ ಯಾತ್ರೆ ಆಯೋಜಿಸಲಾಗಿದೆ ಎಂದು ವಿಜಯೇಂದ್ರ ಹೇಳಿದರು.

ಕಾಂಗ್ರೆಸ್ ಪುಡಾರಿಗಳ ಬಗ್ಗೆ ಬಿಜೆಪಿ ಕಾಯ೯ಕತ೯ರು ಹೆದರಿಕೊಳ್ಳುವ ಅಗತ್ಯವಿಲ್ಲ. ಕಾಂಗ್ರೆಸ್ಸಿಗರ ಷಡ್ಯಂತ್ರಕ್ಕೆ ತಕ್ಕ ಪಾಠ ಕಲಿಸೋಣ ಎಂದರು. ಬಿಜೆಪಿ ಪ್ರಮುಖರಾದ ಆರ್. ಅಶೋಕ್, ಸಿ.ಟಿ. ರವಿ, ನಳಿನ್ ಕುಮಾರ್ ಕಟೀಲು, ಶ್ರೀರಾಮುಲು, ಸುಜಾ ಕುಶಾಲಪ್ಪ, ಕೆ.ಜಿ.ಬೋಪಯ್ಯ, ನಾಪಂಡ ರವಿಕಾಳಪ್ಪ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

Comments are closed.