Kalburgi: ರಾಜ್ಯದಲ್ಲಿ ಮತ್ತೊಂದು ಎಟಿಎಂ ದರೋಡೆ; 18 ಲಕ್ಷ ದೋಚಿದ ದುಷ್ಕರ್ಮಿಗಳು!

Share the Article

Kalburgi: ಕಲಬುರಗಿಯಲ್ಲಿ ಎಟಿಎಂ ದರೋಡೆ ಪ್ರಕರಣ ನಡೆದಿದೆ. ಎಸ್‌ಬಿಐ ಎಟಿಎಂ ಒಡೆದು 18 ಲಕ್ಷ ರೂಪಾಯಿಯನ್ನು ಕಳ್ಳರು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಈ ಘಟನೆ ನಸುಕಿನ ಜಾವ 3 ಗಂಟೆ ಸುಮಾರಿಗೆ ನಡೆದಿದೆ.

ಕಲಬುರಗಿಯ ಪೂಜಾರಿ ಚೌಕ್‌ನಲ್ಲಿ ಎಸ್‌ಬಿಐ ಎಟಿಎಂನಲ್ಲಿ ಕಳ್ಳರು ಹಣ ದೋಚಿ ಎಸ್ಕೇಪ್‌ ಆಗಿದ್ದು, ಎಟಿಎಂ ಕಟ್‌ ಮಾಡಲು ಕಳ್ಳರು ಗ್ಯಾಸ್‌ ಕಟರ್‌ ಬಳಕೆ ಮಾಡಿದ್ದಾರೆ.

ನಿನ್ನೆ ಸಂಜೆ 6 ಗಂಟೆಗೆ ಬ್ಯಾಂಕ್‌ ಸಿಬ್ಬಂದಿ ಎಟಿಎಂಗೆ ಹಣ ಹಾಕಿದ್ದು, ಭದ್ರತಾ ಸಿಬ್ಬಂದಿ ಇಲ್ಲದಿರುವುದನ್ನು ಗಮನಿಸಿದ ದರೋಡೆಕೋರರು ಹಣ ದೋಚಿದ್ದಾರೆ.

ಈ ಕುರಿತು ಕಲಬುರಗಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.