DCM Pawan Kalyan: ಡಿಸಿಎಂ ಪವನ್ ಕಲ್ಯಾಣ್’ಗಾಗಿ ಜಿರೋ ಟ್ರಾಫಿಕ್‌: ನೀಟ್ ಪರೀಕ್ಷೆ ತಪ್ಪಿಸಿಕೊಂಡ 30 ವಿದ್ಯಾರ್ಥಿಗಳು

Share the Article

ಬೆಂಗಳೂರು: ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್’ಗಾಗಿ ನೀಡಲಾಗಿದ್ದ ಜಿರೋ ಟ್ರಾಫಿಕ್‌ನಿಂದಾಗಿ ಹಲವು ವಿದ್ಯಾರ್ಥಿಗಳು ಜೆಇಇ ಪ್ರವೇಶ ಪರೀಕ್ಷೆ ತಪ್ಪಿಸಿಕೊಂಡಿರುವ ಕಳವಳಕಾರಿ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ.

ಮೊನ್ನೆ, ಏಪ್ರಿಲ್ 2ರಂದು ವಿಶಾಖಪಟ್ಟಣಕ್ಕೆ ಪವನ್ ಕಲ್ಯಾಣ್ ಆಗಮಿಸಿದ್ದರು. ಈ ವೇಳೆ ಅವರಿಗೆ ಮತ್ತವರ ಬೆಂಗಾವಲು ಪಡೆಗೆ ಗೋಪಾಲಪಟ್ಟಣಂ ಪೆಂಡುರ್ತಿ ಮಾರ್ಗದ ಸರ್ವಿಸ್ ರಸ್ತೆ ಬಳಿ ಸಾರ್ವಜನಿಕ ಸಂಚಾರವನ್ನು ಟ್ರಾಫಿಕ್ ಪೊಲೀಸರು ಕೆಲಹೊತ್ತು ನಿಲ್ಲಿಸಿದ್ದರು. ಇದರಿಂದಾಗಿ ಅಂದು ಬೆಳಿಗ್ಗೆ ಜೆಇಇ ಪ್ರವೇಶ ಪರೀಕ್ಷೆಗೆ ತೆರಳಬೇಕಿದ್ದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಟ್ರಾಫಿಕ್‌ನಲ್ಲೇ ಸಿಲುಕಿಕೊಂಡು ಪರೀಕ್ಷೆ ತಪ್ಪಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಆದರೆ, ಈ ಆರೋಪವನ್ನು ನಗರ ಪೊಲೀಸರು ನಿರಾಕರಿಸಿದ್ದಾರೆ. ಬೆಳಿಗ್ಗೆ 8.30ರ ನಂತರ ನಾವು ಪವನ್ ಕಲ್ಯಾಣ್ ಅವರಿಗೆ ಜಿರೋ ಟ್ರಾಫಿಕ್ ನೀಡಿದ್ದು, ಹೀಗಾಗಿ ಪರೀಕ್ಷೆಗೆ ಹೋಗುವವರಿಗೆ ತೊಂದರೆ ಆಗಿಲ್ಲ ಎಂದು ತಿಳಿಸಿದ್ದಾರೆ. ಇನ್ನೊಂದೆಡೆ ಕೆಲ ವೈಎಸ್‌ಆರ್ ಕಾಂಗ್ರೆಸ್ ನಾಯಕರು ಹಾಗೂ ನೆಟ್ಟಿಗರು ಡಿಸಿಎಂ ಪವನ್ ಕಲ್ಯಾಣ್ ವಿರುದ್ಧ ಹರಿಹಾಯ್ದಿದ್ದಾರೆ. ಪವನ್ ಕಲ್ಯಾಣ್‌ ಇನ್ನಾದರೂ ಸಿನಿಮಾ ಶೈಲಿಯನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವುದನ್ನು ಬಿಡಬೇಕು ಎಂದು ಕಿಡಿಕಾರಿದ್ದಾರೆ.

Comments are closed.