Chikkaballapura : ಕೇವಲ 15 ದಿನಕ್ಕೆ ಮುರಿದುಬಿತ್ತು ಹಿಂದೂ ಯುವಕ- ಮುಸ್ಲಿಂ ಯುವತಿಯ ಲವ್ ಮ್ಯಾರೇಜ್ !!

Chikkaballapura : ಚಿಕ್ಕಬಳ್ಳಾಪುರದಲ್ಲಿ ಇತ್ತೀಚಿಗಷ್ಟೇ ಮದುವೆಯಾಗಿದ್ದ ಎದುರು-ಬದುರು ಮನೆಯಮುಸ್ಲಿಂ ಯುವತಿ ಹಾಗೂ ಹಿಂದೂ ಯುವಕ ಪ್ರೇಮ ವಿವಾಹ (Love Marriage) ಎರಡೇ ವಾರಕ್ಕೆ ಮುರಿದುಬಿದ್ದಿದೆ.

ಹೌದು, ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಮೈಲಪನಹಳ್ಳಿ ಗ್ರಾಮದ ಎದುರು ಬದುರು ಮನೆಯವರಾಗಿದ್ದ ಫಸಿಯಾ ಹಾಗೂ ನಾಗಾರ್ಜುನ ಪರಸ್ಪರ ಪ್ರೀತಿಸುತ್ತಿದ್ದು, ಇಬ್ಬರ ಮದ್ವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಜೋಡಿ ಮನೆಬಿಟ್ಟು ಹೋಗಿ ಪ್ರೇಮ ವಿವಾಹವಾಗಿತ್ತು. ಮಾರ್ಚ್ 24ರಂದು ಪ್ರೇಮ ವಿವಾಹವಾಗಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದಿದ್ರು. ಆಗ ಪೊಲೀಸರು ಎರಡೂ ಕಡೆಯ ಪೋಷಕರನ್ನ ಕರೆಸಿ ವಿಚಾರಣೆ ಮಾಡಿದ್ದರು. ಯುವತಿಯನ್ನ ಸಹ ಅವರ ಪೋಷಕರ ಜೊತೆ ಮಾತನಾಡಲು ಅವಕಾಶ ನೀಡಲಾಗಿತ್ತು. ಆ ವೇಳೆ ಪೋಷಕರು ಎಷ್ಟು ಬೇಡಿಕೊಂಡಿದ್ದರೂ ಸಹ ಯುವತಿ ಮಾತ್ರ ತಾನು ಮದುವೆಯಾದ ಯುವಕನ ಜೊತೆಯಲ್ಲೇ ಹೋಗುವುದಾಗಿ ಕಡ್ಡಿಮುರಿದಂತೆ ಹೇಳಿದ್ದಳು. ಆದ್ರೆ, ಇದೀಗ 15 ದಿನದಲ್ಲೇ ಈ ಪ್ರೇಮ ವಿವಾಹ ಅಂತ್ಯಕಂಡಿದೆ. ಯುವತಿ ಯುವಕನನ್ನು ನಡುನೀರಿನಲ್ಲಿ ಕೈಬಿಟ್ಟಿದ್ದಾಳೆ.

ಇದೀಗ ಯುವತಿಯ ತಾಯಿ ಇದೇ ಕೊರಗಿನಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ, ಆಕೆ ಪೊಲೀಸರಿಗೆ ಮುಚ್ಚಳಿಕೆ ಬರೆದುಕೊಟ್ಟು, ತನ್ನ ತವರು ಮನೆ ಸೇರಿದ್ದಾಳೆ. ಈ ಮೂಲಕ ಹದಿನೈದು ದಿನಗಳೊಳಗೆ ಮುಸ್ಲಿಂ ಯುವತಿ ಹಾಗೂ ಹಿಂದೂ ಯುವಕನ ಪ್ರೇಮ ವಿವಾಹ ಮುರಿದುಬಿದ್ದಿದೆ.

Comments are closed.