R Ashok: ಸಿಲಿಂಡರ್ ಬೆಲೆಯಲ್ಲಿ 50 ರೂ ಹೆಚ್ಚಳ – ಅದೇನು ಹೆಚ್ಚಲ್ಲ ಬಿಡಿ ಎಂದ ಆರ್ ಅಶೋಕ್!!

R Ashok: ಇತ್ತೀಚಿಗಷ್ಟೇ ಸಿಲಿಂಡರ್ ಬೆಲೆಯಲ್ಲಿ ಕೇಂದ್ರ ಸರ್ಕಾರವು 50 ರೂಪಾಯಿ ಹೆಚ್ಚಿಸಿ ಆದೇಶ ಹೊರಡಿಸಿತ್ತು. ಈ ಕುರಿತಾಗಿ ಪ್ರತಿಕ್ರಿಯುತ್ತಿರುವ ರಾಜ್ಯದ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ಶಾಸಕ ಆರು ಅಶೋಕ್ ಅವರು ಇದೇನು ಹೆಚ್ಚಲ್ಲ ಬಿಡಿ ಎಂದು ಉಡಾಫೆಯ ಮಾತನಾಡಿದ್ದಾರೆ.
ರಾಜ್ಯದಲ್ಲಿ ರಾಜ್ಯ ಸರ್ಕಾರ ದಿನೇ ದಿನೇ ಒಂದೊಂದು ವಸ್ತುವಿನ ಬೆಲೆಯನ್ನು ಏರಿಕೆ ಮಾಡುತ್ತಿದ್ದು ಇದರ ಕುರಿತು ರಾಜ್ಯ ಬಿಜೆಪಿ ನಿರಂತರ ಹೋರಾಟ ಮಾಡುತ್ತಿದೆ. ಇತ್ತೀಚಿಗಷ್ಟೇ ಅಹೋರಾತ್ರಿ ಧರಣಿಯನ್ನು ಕೈಗೊಂಡಿತ್ತು. ಆದರೆ ಈಗ ಆರ್ ಅಶೋಕ್ ಅವರು ಕೇಂದ್ರ ಸರ್ಕಾರದ ಬೆಲೆ ಏರಿಕೆ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಸಿಲಿಂಡರ್ ದರದಲ್ಲಿ 50 ಹೆಚ್ಚಳ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಅದೇನು ಹೆಚ್ಚಲ್ಲ ಬಿಡಿ ಎಂದು ಉಡಾಫೆ ಮಾತನಾಡಿದ್ದಾರೆ.
ಹೌದು, ಮಾಧ್ಯಮ ಪ್ರತಿನಿಧಿಯೊಬ್ಬರು ನೀವು ಒಂದೆಡೆ ರಾಜ್ಯ ಸರ್ಕಾರದ ವಿರುದ್ಧ ಬೆಲೆ ಏರಿಕೆ ಹೋರಾಟ ಮಾಡುತ್ತಿದ್ದೀರಿ. ಆದರೆ ಕೇಂದ್ರ ಸರ್ಕಾರ ಸಿಲಿಂಡರ್ ಬೆಲೆಯನ್ನು 50 ರೂ.ಗೆ ಏರಿಸಿರುವುದು ನಿಮಗೆ ಹಿನ್ನಡೆಯಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ‘ಇದಕ್ಕೆ ಉತ್ತರಿಸಿದ ಅವರು ಎಲ್ ಪಿಜಿ ಸಿಲಿಂಡರ್ ದರ 50 ರೂ. ಏರಿಕೆ ಮಾಡಿರುವುದು ಅಂಥಾ ದೊಡ್ಡ ಹೊರೆಯೇನೂ ಆಗಲ್ಲ. ಯಾಕೆಂದರೆ ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಸಬ್ಸಿಡಿ ಕೊಡ್ತಿದೆ. ಹೀಗಾಗಿ ಜನರಿಗೆ ಹೊರೆ ಆಗಲ್ಲ. ಮೋದಿ ಸರ್ಕಾರ ಜನರಿಗೆ ಎಷ್ಟು ಹೊರೆ ಕಡಿಮೆ ಮಾಡಬಹುದೋ ಅಷ್ಟು ನೋಡಿಕೊಂಡು ಏರಿಕೆ ಮಾಡಿದ್ದಾರೆ’ ಎಂದಿದ್ದಾರೆ. ಇದೀಗ ಆರ್ ಅಶೋಕ್ ಅವರ ಮಾತಿಗೆ ರಾಜ್ಯಾದ್ಯಂತ ಬಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
Comments are closed.