Diesel Price Hike: ಸಾರಿಗೆ ಬಸ್ ದರ ಏರಿಕೆ ಇಲ್ಲ-ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ!

Diesel Price Hike: ಡೀಸೆಲ್ ಬೆಲೆ ಏರಿಕೆಯಾಗಿದ್ದರೂ ಸಾರಿಗೆ ಬಸ್ ದರ ಏರಿಕೆ ಮಾಡಲ್ಲ ಎಂದು ರಾಜ್ಯದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.
ಬಸ್ ದರ ಇತ್ತೀಚೆಗೆ ಏರಿಕೆ ಆಗಲು ಕಾರಣವಿತ್ತು. 2020 ರಲ್ಲಿ ದರ ಪರಿಷ್ಕರಣೆಯಾಗಿತ್ತು. ಆಗ ದಿನಕ್ಕೆ ಒಂಭತ್ತು ಕೋಟಿ ರೂ.ಗೆ ಅಧಿಕ ಡೀಸೆಲ್ ಖರ್ಚು ಆಗುತ್ತಿತ್ತು. ಇದು 13 ಕೋಟಿ ರೂ.ಗೆ ಹೆಚ್ಚಾಗಿತ್ತು. ಅಷ್ಟು ಮಾತ್ರವಲ್ಲದೇ ವೇತನ ವೆಚ್ಚವು 6 ಕೋಟಿಯಿಂದ 12 ಕೋಟಿ ರೂ.ಗೆ ತಲುಪಿತ್ತು. ಈಗ ಅಂತಹ ಯಾವುದೇ ಪ್ರಸ್ತಾವನೆಯೂ ಇಲ್ಲ ಎಂದು ಸುದ್ದಿಗಾರರ ಜೊತೆಗೆ ಹೇಳಿದರು.
Comments are closed.