Mohan Bhagwat: ಮುಸ್ಲಿಮರು ಕೂಡ RSS ಸೇರಬಹುದು, ಆದ್ರೆ ಒಂದು ಷರತ್ತು ಇದೆ – ಮೋಹನ್ ಭಾಗವತ್ ಹೇಳಿಕೆ

Mohan Bhagwat: ಮುಸ್ಲಿಮರು ಕೂಡ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸೇರಬಹುದು. ಆದರೆ ಒಂದು ಷರತ್ತು ಅನ್ವಯವಾಗುತ್ತದೆ ಎಂದು RSS ಸರ ಸಂಘ ಚಾಲಕ ಮೋಹನ್ ಭಾಗವತ್ ಹೇಳಿಕೆ ನೀಡಿದ್ದಾರೆ.
ನಾಲ್ಕು ದಿನಗಳ ವಾರಾಣಾಸಿಯ ಪ್ರವಾಸದಲ್ಲಿರುವ ಮೋಹನ್ ಭಾಗವತ್ ಅವರು, ಏಪ್ರಿಲ್ 6ರ ಭಾನುವಾರದಂದು ಯಾರೆಲ್ಲಾ RSS ಸೇರ್ಪಡೆ ಆಗಬಹುದು ಪ್ರಶ್ನೆಗೆ ಉತ್ತರಿಸಿದ ಅವರು ಮುಸ್ಲಿಮರು ಕೂಡ ನಮ್ಮ ಸಂಘವನ್ನು ಸೇರಬಹುದು. ಆದರೆ ಒಂದು ಷರತ್ತು ಅನ್ವಯವಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಓರ್ವ ಕಾರ್ಯಕರ್ತ, ಮುಸ್ಲಿಮರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರನ್ನಾಗಿ ಮಾಡಿಕೊಳ್ಳಬಹುದೇ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಮೋಹನ್ ಭಾಗವತ್, ಹೌದು. ಆದ್ರೆ ಒಂದು ಕಂಡೀಷನ್ ಎಂದು ಹೇಳಿದ ಅವರು ‘ನಮ್ಮ ಆರ್‌ಎಸ್‌ಎಸ್ ಶಾಖೆಗೆ ಭಾರತದ ಎಲ್ಲಾ ವಾಸಿಗಳಿಗೆ ಸ್ವಾಗತ. ಆದರೆ ಶಾಖೆ ಸೇರ್ಪಡೆಯಾಗುವ ಪ್ರತಿಯೊಬ್ಬ ವ್ಯಕ್ತಿ ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಹೇಳಲು ಯಾವುದೇ ಕಾರಣಕ್ಕೂ ಹಿಂದೇಟು ಹಾಕಿರಬಾರದು ಮತ್ತು ಕೇಸರಿ ಧ್ವಜವನ್ನು ಗೌರವಿಸಬೇಕು ಎಂದು ಮೋಹನ್ ಭಾಗವತ್ ಹೇಳಿಕೆ’ ನೀಡಿದ್ದಾರೆ. ಸದ್ಯ ಮೋಹನ್ ಭಾಗವತ್ ನೀಡಿದ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Comments are closed.