Telangana : ಚಪಾತಿ ತಿಂದು ತಾಯಿ- ಮಗ ಸಾವು!!

Telangana : ಚಪಾತಿ ತಿಂದು ಮಲಗಿದ ಕೆಲವೇ ಹೊತ್ತಿನಲ್ಲಿ ತಾಯಿ ಮಗ ಸಾವನ್ನಪ್ಪಿರುವಂತಹ ಅಘಾತಕಾರಿ ಘಟನೆ ಒಂದು ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣ ರಾಜ್ಯದ ರಾಜಣ್ಣ ಸಿರಿಸಿಲ್ಲಾ ಜಿಲ್ಲೆಯ ರುದ್ರಂಗಿ ಮಂಡಲದಲ್ಲಿ ಭಾನುವಾರ (ಏಪ್ರಿಲ್ 06) ಚಪಾತಿ ತಿಂದ ಸ್ವಲ್ಪ ಹೊತ್ತಿನಲ್ಲೇ ತಾಯಿ ಮತ್ತು ಮಗ ಅಸ್ವಸ್ಥರಾಗಿ, ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ದುರಂತ ಸಾವಿಗೀಡಾಗಿದ್ದಾರೆ. ಮೃತರನ್ನು ತಾಯಿ ಪುಷ್ಪಲತಾ (35) ಮತ್ತು ಮಗ ನಿಹಾನ್ (6) ಎಂದು ಗುರುತಿಸಲಾಗಿದೆ.
ಶುಕ್ರವಾರ (ಏಪ್ರಿಲ್ 04) ರಾತ್ರಿ ಚಪಾತಿ ತಿಂದ ಕೆಲವೇ ಹೊತ್ತಲ್ಲಿ ಅಮ್ಮ-ಮಗ ಅಸ್ವಸ್ಥರಾಗಿರುವುದನ್ನು ಕುಟುಂಬ ಸದಸ್ಯರು ಗಮನಿಸಿದರು. ಮಧ್ಯರಾತ್ರಿಯ ಸುಮಾರಿಗೆ ಇಬ್ಬರೂ ವಾಂತಿ ಮತ್ತು ಅತಿಸಾರದಿಂದ ಬಳಲುತ್ತಿದ್ದರು. ಬಳಿಕ ಅವರನ್ನು ಕೊರುಟ್ಲಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಉತ್ತಮ ಚಿಕಿತ್ಸೆಗಾಗಿ ಕರೀಂನಗರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ವೈದ್ಯರು ಚಿಕಿತ್ಸೆ ಆರಂಭಿಸಿದರು ಕೂಡ ಅದು ಫಲಕಾರಿಯಾಗಲಿಲ್ಲ. ಭಾನುವಾರ ರಾತ್ರಿ ಪುಷ್ಪಲತಾ ಸಾವಿಗೀಡಾದರೆ, ಮಾರನೇ ದಿನ ಅಂದರೆ ಸೋಮವಾರ (ಏಪ್ರಿಲ್ 7) ನಿಹಾನ್ (6) ಕೂಡ ಕೊನೆಯುಸಿರೆಳೆದಿದ್ದಾರೆ.
Comments are closed.