Result: ಕಾರ್ಕಳದ ಜ್ಞಾನ ಸುಧಾ ವಿದ್ಯಾರ್ಥಿನಿ ಆಸ್ತಿ ಎಸ್. ಶೆಟ್ಟಿ ರಾಜ್ಯಕ್ಕೆ 4ನೇ ರ್ಯಾಂಕ್, ಜಿಲ್ಲೆಗೆ ಪ್ರಥಮ!

Share the Article

ಕಾರ್ಕಳ: 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಕಾರ್ಕಳ ಜ್ಞಾನಸುಧಾ ಕಾಲೇಜಿನ ವಿದ್ಯಾರ್ಥಿನಿ ಆಸ್ತಿ ಎಸ್. ಶೆಟ್ಟಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದು, ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.

596 ಅಂಕದೊಂದಿಗೆ ವಿಜ್ಞಾನ ವಿಭಾಗದಲ್ಲಿ ಆಕೆ ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ. ಆಸ್ತಿ ಎಸ್. ಶೆಟ್ಟಿ ಕಾರ್ಕಳ ಜೋಡುರಸ್ತೆಯ ಸತೀಶ್‌ಚಂದ್ರ ಶೆಟ್ಟಿ ಮತ್ತು ಅನುಪಮಾ ದಂಪತಿಯ ಪುತ್ರಿ.

Comments are closed.