Chennai: ಹೆರಿಗೆ ಆದಾಗ ನೋವಿನಲ್ಲೂ ಸಂಭೋಗಕ್ಕೆ ಒತ್ತಾಯ – ಶ್ರೀಮಂತ ಉದ್ಯಮಿಯ ಕರಾಳ ಮುಖ ಬಿಚ್ಚಿಟ್ಟ ಪತ್ನಿ !!

Chennai: ಚೆನ್ನೈ ಮೂಲದ ಟೆಕ್ಕಿ ಪ್ರಸನ್ನ ಶಂಕರ್ ದಾಂಪತ್ಯ ವಿಚಾರ ದೇಶಾದ್ಯಂತ ಸದ್ದು ಮಾಡುತ್ತಿದ್ದು ಸಾಕಷ್ಟು ಗೊಂದಲಗಳನ್ನು ಸೃಷ್ಟಿಸುತ್ತಿದೆ. ಈ ಬೆನ್ನಲ್ಲೇ ಪ್ರಸನ್ನ ವಿರುದ್ಧ ಪತ್ನಿ ದಿವ್ಯಾ ಶಶಿಧರ್ ಅವರು ಲೈಂಗಿಕ ವಿಕೃತಿಯ ಆರೋಪ ಮಾಡಿದ್ದಾರೆ.
ಹೌದು, ಸಿಂಗಪುರದಲ್ಲಿ ನೆಲೆಸಿರುವ ಚೆನ್ನೈ ಮೂಲದ ಉದ್ಯಮಿ ಪ್ರಸನ್ನ ಶಂಕರ್ ಅವರು ತಮ್ಮ ಪತ್ನಿಯ ವಿರುದ್ಧ ಗುರುತರ ಆರೋಪಗಳನ್ನು ಮಾಡಿದ್ದು, ದಿವ್ಯಾ ಶಶಿಧರ್ 9 ಕೋಟಿ ರೂ ಜೀವನಾಂಶ ಪಡೆದ ಬಳಿಕವೂ ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಬೆನ್ನಲ್ಲೇ ತನ್ನ ಪತಿ ಲೈಂಗಿಕ ಕಾರ್ಯಕರ್ತರನ್ನು ಆಕರ್ಷಿಸಿ, ಎಸ್ಕಾರ್ಟ್ ಸಂಭೋಗಕ್ಕೆ ಒತ್ತಾಯಿಸಿದ್ದಾರೆ ಎಂಬ ಆರೋಪವನ್ನು ದಿವ್ಯ ಶಶಿಧರ್ ಹೊರಿಸಿದ್ದಾರೆ.
ಶಂಕರ್ ಲೈಂಗಿಕ ಕಾರ್ಯಕರ್ತರನ್ನು ಆಹ್ವಾನಿಸಿದ್ದು, ವಿವಾಹೇತರ ಸಂಬಂಧಗಳಿಗೆ ಒಪ್ಪಿಕೊಳ್ಳುವಂತೆ ಒತ್ತಡ ಹೇರಿದರು ಮತ್ತು ಗುಪ್ತವಾಗಿ ರೆಕಾರ್ಡ್ ಮಾಡಲು ಅವರ ಮನೆಯಲ್ಲಿ ಕ್ಯಾಮೆರಾಗಳನ್ನು ಇರಿಸಿದ್ದರು ಎಂದು ದಿವ್ಯಾ ಶಶಿಧರ್ ಹೇಳಿರುವುದನ್ನು ದಿ ಸ್ಯಾನ್ ಫ್ರಾನ್ಸಿಸ್ಕೋ ಸ್ಟ್ಯಾಂಡರ್ಡ್ ವರದಿ ಮಾಡಿದೆ.
ಅಷ್ಟೇ ಅಲ್ಲದೆ 2016ರಲ್ಲಿ ನನ್ನ ಹೆರಿಗೆಯಾದ ಕೂಡಲೇ ಶಂಕರ್ ತನ್ನನ್ನು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದರು, ಇದು ಪುರುಷರ ಪ್ರಾಥಮಿಕ ಅಗತ್ಯ ನೀನು ಎಷ್ಟು ನೋವಿನಲ್ಲಿದ್ದೀಯಾ ಎಂಬುದು ಮುಖ್ಯವಲ್ಲ, ಒಂದು ವೇಳೆ ನಿರಾಕರಿಸಿದರೆ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕುತ್ತಿದ್ದರು ಎಂದು ಪತ್ನಿ ದಿವ್ಯ ಶಶಿಧರ್ ಆರೋಪಿಸಿದ್ದಾರೆ.
Comments are closed.