Belal: ಕಾಡಿನಲ್ಲಿ ಸಿಕ್ಕ ಮಗುವಿನ ತಂದೆ ತಾಯಿಯ ವಿವಾಹ!

Belthangady: ಕುತ್ರೊಟ್ಟು ಬೆಳಾಲಿನ ಮುಂಡ್ರೊಟ್ಟು ಮಾಯ ಕಾಡಿನಲ್ಲಿ ಸಿಕ್ಕ ಮಗುವಿನ ತಂದೆ ತಾಯಿ ಎ.2 ರಂದು ಪತ್ತೆಯಾದ ಬೆನ್ನಲ್ಲೇ ಇದೀಗ ಎ.6 ರಂದು ಎರಡು ಕುಟುಂಬದವರ ಒಪ್ಪಿಗೆಯ ಮೇರೆಗೆ ನಡ ಗ್ರಾಮದ ಕುತ್ರೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ.
ದೇವಸ್ಥಾನದ ಅರ್ಚಕರ ಪೌರೋಹಿತ್ಯದಲ್ಲಿ ಮದುವೆ ನಡೆದಿದೆ. ಎರಡೂ ಕುಟುಂಬದವರು ಈ ಮದುವೆಗೆ ಹಾಜರಿದ್ದರು.
ಬೆಳಾಲು ಮಾಯದ ತಿಮ್ಮಪ್ಪ ಗೌಡರ ಪುತ್ರ ರಂಜಿತ್ ಮತ್ತು ಧರ್ಮಸ್ಥಳದ ಕೊಳಂಗಾಜೆ ಧರ್ಣಪ್ಪ ಗೌಡರ ಪುತ್ರಿ ಸುಶ್ಮಿತಾ ಅವರ ವಿವಾಹ ಎ.6 ರಂದು ನಡೆದಿದೆ. ಮಗುವನ್ನು ಮುಂದೆ ಕಾನೂನಾತ್ಮಕವಾಗಿ ಪಡೆಯುವುದಾಗಿ ಕುಟುಂಬದ ಮೂಲಗಳು ತಿಳಿಸಿರುವ ಕುರಿತು ವರದಿಯಾಗಿದೆ.
Comments are closed.