Puttur: ಪುತ್ತೂರು: ನನ್ನನ್ನು ಹುಡುಕಬೇಡಿ ಎಂದು ನಾಪತ್ತೆಯಾಗಿದ್ದ ವಿದ್ಯಾರ್ಥಿ ಮೊಹಮ್ಮದ್ ಹಸೈನಾ‌ರ್ ಪತ್ತೆ!

Puttur : ಎ 5 ರಂದು ಶನಿವಾರ ಸಂಜೆ ಕೊಡಿಪ್ಪಾಡಿ ಮನೆಯಿಂದ ಇನ್ನು ಹುಡುಕಬೇಡಿ ಎಂದು ಹೇಳಿ ನಾಪತ್ತೆಯಾಗಿದ್ದ ವಿದ್ಯಾರ್ಥಿ ಮೊಹಮ್ಮದ್ ಹಸೈನಾ‌ರ್ ರವಿವಾರ ಅರಸೀಕೆರೆಯಲ್ಲಿ ಪತ್ತೆಯಾಗಿದ್ದಾನೆ.

ಕೊಡಿಪ್ಪಾಡಿ ನಿವಾಸಿ ರಝಕ್ ಮತ್ತು ಸಕೀನ ದಂಪತಿಗಳ ಪುತ್ರ ಪುತ್ತೂರು ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ಹಸೈನಾರ್(15ವ) ಎ.5 ರಂದು ನಾಪತ್ತೆ ಯಾಗಿದ್ದ. ಪೋಷಕರು ಪುತ್ತೂರು ಠಾಣೆಯಲ್ಲಿ ದೂರು ನೀಡಿದ್ದು ಪೋಷಕರಿಂದ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದಾಗ ಸಂಜೆ ಅರಸೀನಕೆರೆ ಸಮೀಪ ಈತ ಪತ್ತೆಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.

Comments are closed.