Praveen Nettaru Murder Case: ಪೊಲೀಸ್‌ ಭದ್ರತೆ ನಡುವೆ ಪ್ರವೀಣ್‌ ನೆಟ್ಟಾರು ಕೊಲೆ ಆರೋಪಿಗೆ ಮುತ್ತಿಟ್ಟ ಯುವಕ!

Praveen Nettaru Murder Case: ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗೆ ಪೊಲೀಸ್‌ ಭದ್ರತೆಯ ನಡುವೆಯೇ ಯುವಕನೋರ್ವ ಮುತ್ತಿಟ್ಟಿರುವ ಘಟನೆ ನಡೆದಿದೆ.

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ಮಾಸ್ಟರ್‌ ಮೈಂಡ್‌ ಶಾಫಿ ಬೆಳ್ಳಾರೆಯನ್ನು ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಕರೆದುಕೊಂಡು ಬಂದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕೋರ್ಟ್‌ ಆವರಣದಲ್ಲಿ ಪೊಲೀಸರ ಭದ್ರತೆ ನಡುವೆ ಯುವಕನೋರ್ವ ಆರೋಪಿ ಶಾಫಿ ಬೆಳ್ಳಾರೆ ಹಣೆಗೆ ಕಿಸ್‌ ಮಾಡಿದ್ದಾನೆ.

ಕೋರ್ಟ್‌ ಆವರಣದಲ್ಲಿ ಗೇಟಿನ ಬಳಿ ನಿಂತಿದ್ದ ಯುವಕ ಪೊಲೀಸರ ಭದ್ರತೆ ನಡುವೆ ಬರುತ್ತಿದ್ದ ಆರೋಪಿಯ ತಲೆಯನ್ನು ಹಿಡಿದು ಹಣೆಗೆ ಮುತ್ತುಕೊಟ್ಟು ಸ್ಮೈಲ್‌ ಮಾಡುತ್ತಾನೆ. ಇದಕ್ಕೆ ಪ್ರತಿಯಾಗಿ ಆರೋಪಿ ಕೂಡಾ ನಗುತ್ತಲೇ ಕೋರ್ಟ್‌ ಒಳಗೆ ಹೋಗುತ್ತಾನೆ. ಆದರೆ ಇದೆಲ್ಲ ನಡೆದರೂ ಪೊಲೀಸರು ಆ ಯುವಕನನ್ನು ಪಕ್ಕಕ್ಕೆ ಸರಿಸಿ ಆರೋಪಿಯನ್ನು ಕೋರ್ಟ್‌ ಆವರಣದೊಳಗೆ ಕರೆದುಕೊಂಡು ಹೋಗುತ್ತಾರೆ. ಆರೋಪಿಯ ತಲೆಗೆ ಮುತ್ತಿಟ್ಟರೂ ಪೊಲೀಸರು ಸುಮ್ಮನಿದ್ದಿದ್ದು, ನೋಡಿ ಜನರು ಪ್ರಶ್ನೆ ಮಾಡುತ್ತಿದ್ದಾರೆ.

ಆರೋಪಿ ಸಾಫಿ ಬೆಳ್ಳಾರೆಯನ್ನು ಬಾಡಿ ವಾರೆಂಟ್‌ ಮೂಲಕ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬೆಳ್ತಂಗಡಿ ಕೋರ್ಟ್‌ಗೆ ಹಾಜರು ಪಡಿಸಲಾಗಿದೆ. 2017 ರಲ್ಲಿ ಆರ್‌.ಎಸ್.ಎಸ್‌ ಹಾಗೂ ಕಲ್ಲಡ್ಕ ಭಟ್‌ ವಿರುದ್ಧ ಉದ್ರೇಕಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳ್ತಂಗಡಿ ಕೋರ್ಟ್‌ಗೆ ಹಾಜರು ಮಾಡಲಾಗಿದೆ.

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಆರೋಪಿ ಸಾಫಿ ಬೆಳ್ಳಾರೆಯನ್ನು ಎರಡು ವರ್ಷದ ಹಿಂದೆ ಎನ್‌ಐಎ ಬಂಧನ ಮಾಡಿ ನ್ಯಾಯಾಂಗ ಬಂಧನದಲ್ಲಿಟ್ಟಿದೆ. ಕೋರ್ಟ್‌ಗೆ ಹಾಜರುಪಡಿಸಿ ಆರೋಪಿ ಸಾಫಿಯನ್ನು ಮತ್ತೆ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲಾಗಿದೆ.

Comments are closed.