Moodabidre: ಸ್ಕೂಟರ್‌ಗೆ ಡಿಕ್ಕಿ ಹೊಡೆದ ಲಾರಿ; ದಂಪತಿ ಸ್ಥಿತಿ ಗಂಭೀರ!

Moodabidre: ಲಾರಿ ಸ್ಕೂಟರ್‌ಗೆ ಡಿಕ್ಕಿಯಾಗಿ ದಂಪತಿ ಗಂಭೀರ ಗಾಯಗೊಂಡ ಘಟನೆ ಬೆಳುವಾಯಿ ಗ್ರಾಮದ ಅಂಬೂರಿ ಜಂಕ್ಷನ್‌ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಗಾಯಗೊಂಡವರನ್ನು ದಂಪತಿ ಪ್ರಸಾದ್‌ ಮತ್ತು ಶಮಿತಾ ಎಂದು ತಿಳಿದು ಬಂದಿದೆ.

ಲಾರಿ ಚಾಲಕ ಆರೋಪಿ ನವೀದ್‌ ಲಾರಿಯನ್ನು ಕೆಸರುಗದ್ದೆ ಜಂಕ್ಷನ್‌ನಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಪರಿಣಾಮ ಕಾನ ಕಡೆಯಿಂದ ಪ್ರಸಾದ್‌ ಚಲಾಯಿಸಿಕೊಂಡು ಬರುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿರುವ ಕುರಿತು ವರದಿಯಾಗಿದೆ.

ಶಮಿತಾ ಅವರ ಕಾಲು ಜಖಂಗೊಂಡಿದ್ದು, ಇವರನ್ನು ಮೂಡುಬಿದಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಗಂಭೀರ ಸ್ಥಿತಿಯಲ್ಲಿದ್ದ ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿರುವ ಕುರಿತು ವರದಿಯಾಗಿದೆ. ಗಾಡಿಯಲ್ಲಿದ್ದ ಆರು ವರ್ಷದ ಮಗ ದೂರಕ್ಕೆ ಎಸೆಯಲ್ಪಟ್ಟಿದ್ದು, ಅಪಾಯದಿಂದ ಪಾರಾಗಿರುವ ಕುರಿತು ವರದಿಯಾಗಿದೆ.

ಈ ಘಟನೆ ಕುರಿತು ಮೂಡುಬಿದಿರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Comments are closed.