LPG Price Hike: ಜನರಿಗೆ ಶಾಕ್‌ ಮೇಲೆ ಶಾಕ್‌; ಅಡುಗೆ ಇಂಧನದ ಬೆಲೆ 50ರೂ ಹೆಚ್ಚಳ!

LPG Price Hike: ಕೇಂದ್ರ ಸರಕಾರ ಅಡುಗೆ ಅನಿಲದ ಸಿಲಿಂಡರ್‌ ಬೆಲೆಯನ್ನು ಏರಿಕೆ ಮಾಡಿದೆ. 14.2 ಕಿಲೋ ಎಲ್‌ಪಿಜಿ ಬೆಲೆಯನ್ನು ಸಿಲಿಂಡರ್‌ಗೆ 50ರೂ. ನಷ್ಟು ಹೆಚ್ಚಳ ಮಾಡಿ, ಬಿಸಿ ಏರಿಕೆಯ ಬಿಸಿಯನ್ನು ಜನರಿಗೆ ನೀಡಿದೆ.

ಕೇಂದ್ರ ತೈಲ ಸಚಿವ ಹರ್ದೀಪ್‌ ಸಿಂಗ್‌ ಪುರಿ ಅವರು ಎಲ್‌ಪಿಜಿ ಬೆಲೆ ಏರಿಕೆ ಮಾಡಿರುವುದನ್ನು ಸೋಮವಾರ (ಇಂದು) ದೃಢಪಡಿಸಿದ್ದಾರೆ. ಉಜ್ವಲಾ ಮತ್ತು ಸಾಮಾನ್ಯ ವರ್ಗದ ಗ್ರಾಹಕರಿಗೆ ಅನಿಲ ಬೆಲೆಯನ್ನು ಹೆಚ್ಚಳ ಮಾಡಲಾಗಿರುವ ಕುರಿತು ಸಚಿವರು ಹೇಳಿದ್ದಾರೆ.

Comments are closed.