New Religion: ದೇಶದಲ್ಲಿ ಹೊಸ ಧರ್ಮದ ಉದಯ? ಅಚ್ಚರಿ ಮೂಡಿಸಿದ ಮುಸ್ಲಿಂ ಧರ್ಮ ಗುರು ಹೇಳಿಕೆ

New Religion: ಭಾರತದಲ್ಲಿ ಈಗ ಮತ್ತೊಂದು ಹೊಸ ಧರ್ಮದ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಮುಸ್ಲಿಂ ಧರ್ಮ ಗುರು ಒಬ್ಬರು ನೀಡಿರುವಂತಹ ಹೇಳಿಕೆ.
ಹೌದು, ಭಾರತದ ಪ್ರಮುಖ ಮುಸ್ಲಿಂ ಧರ್ಮಗುರುಗಳಲ್ಲೊಬ್ಬರಾದ ಇಮಾಮ್ ಉಮರ್ ಅಹ್ಮದ್ ಇಲ್ಯಾಸ್ ಅವರು ಇತ್ತೀಚೆಗೆ ನೀಡಿದ ಹೇಳಿಕೆಯೊಂದು ಜಾಗತಿಕ ಮಟ್ಟದಲ್ಲಿ ಹೊಸ ಸಂಚಲನ ಮೂಡಿಸಿದ್ದು ಭಾರತದಲ್ಲಿ ಶೀಘ್ರದಲ್ಲೇ ಹೊಸ ಧರ್ಮವೊಂದು ಉದಯವಾಗದೆಯಾ? ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ಮುಸ್ಲಿಮರು, ಯಹೂದಿಗಳು ಮತ್ತು ಕ್ರಿಶ್ಚಿಯನ್ನರನ್ನು ಒಂದೇ ವೇದಿಕೆಗೆ ತರಲಿದೆ ಎಂದು ಧರ್ಮ ಗುರುಗಳು ಭವಿಷ್ಯ ನುಡಿದಿದ್ದಾರೆ. ಇಸ್ಲಾಂ, ಯಹೂದಿ ಮತ್ತು ಕ್ರಿಶ್ಚಿಯನ್ ಧರ್ಮಗಳು ಮೂಲತಃ ಒಂದೇ ಆಗಿದ್ದು, ಅವುಗಳಿಗೆಲ್ಲ ಒಂದೇ ಪೂರ್ವಜರಿದ್ದಾರೆ. ಆದರೆ ಕಾಲಾನಂತರದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿ ಸಂಘರ್ಷಗಳು ನಡೆದಿವೆ. ಈ ಭಿನ್ನಾಭಿಪ್ರಾಯಗಳನ್ನು ನಿವಾರಿಸಿ, ಎಲ್ಲರನ್ನು ಒಂದೇ ಸೂರಿನಡಿ ತರಲು “ಅಬ್ರಹಾಮಿಕ್ ಒನ್ ಫೇಯ್ತ್” ಎಂಬ ಹೊಸ ನಂಬಿಕೆ ರೂಪುಗೊಳ್ಳುವ ಸಾಧ್ಯತೆ ಇದೆ ಎಂದು ಇಮಾಮ್ ಇಲ್ಯಾಸ್ ಅಭಿಪ್ರಾಯಪಟ್ಟಿದ್ದಾರೆ.
ಅಷ್ಟೇ ಅಲ್ಲದೆ ಈ ಮಹತ್ವದ ಕಾರ್ಯಕ್ಕಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬುಧಾಬಿಯಲ್ಲಿ ಈಗಾಗಲೇ “ಅಬ್ರಹಾಮಿಕ್ ಫೇಯ್ತ್ ಸೆಂಟರ್” ಎಂಬ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಮೂರು ಧರ್ಮಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ವಿವರಿಸಿದ್ದಾರೆ. ಈ ಹೊಸ ಧರ್ಮವು ಯಾವಾಗ ಅಸ್ತಿತ್ವಕ್ಕೆ ಬರುತ್ತದೆ ಎಂಬ ನಿಖರವಾದ ಸಮಯವನ್ನು ಅವರು ಹೇಳದಿದ್ದರೂ, ಅದಕ್ಕಾಗಿ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ ಎಂದು ತಿಳಿಸಿದ್ದಾರೆ.
ಜೊತೆಗೆ ಇಸ್ಲಾಂ, ಯಹೂದಿ ಮತ್ತು ಕ್ರಿಶ್ಚಿಯನ್ ಧರ್ಮಗಳ ಆರಾಧನಾ ಪದ್ಧತಿಗಳು ಬೇರೆಯಾಗಿದ್ದರೂ, ಅವುಗಳ ಮೂಲ ಮೌಲ್ಯಗಳು ಮತ್ತು ತತ್ವಗಳು ಒಂದೇ ಆಗಿವೆ. ಈ ಧರ್ಮಗಳನ್ನು ಒಗ್ಗೂಡಿಸುವ ಪ್ರಯತ್ನಗಳು ಈಗಾಗಲೇ ಜಗತ್ತಿನಾದ್ಯಂತ ನಡೆಯುತ್ತಿವೆ ಮತ್ತು “ಅಬ್ರಹಾಮಿಕ್ ಫೇಯ್ತ್” ಶೀಘ್ರದಲ್ಲೇ ಅಸ್ತಿತ್ವಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Comments are closed.