Divorce: ವಿಚ್ಚೇದನ ಪ್ರಮಾಣ ಏರಿಕೆ: ದೇಶದಲ್ಲಿ ಕರ್ನಾಟಕ ರಾಜ್ಯಕ್ಕೆ ಎಷ್ಟನೇ ಸ್ಥಾನ?!

Divorce: ವಿಚ್ಚೇದನ (Divorce) ಪ್ರಕರಣಗಳು ಹೆಚ್ಚಾಗುತ್ತಿದ್ದು ಕರ್ನಾಟಕ ಶೇ.17ರಷ್ಟು ವಿಚ್ಛೇದನ ದರ ಹೊಂದುವ ಮೂಲಕ ದೇಶದಲ್ಲೇ ಎರಡನೇ ಅತಿ ಹೆಚ್ಚು ವಿಚ್ಛೇದನ ಪಡೆಯುವ ರಾಜ್ಯ ಎಂಬ ಹೆಸರಿಗೆ ಪಾತ್ರವಾಗಿದೆ.

ವರದಿಯ ಪ್ರಕಾರ, 2025ರ ಜನವರಿಯಿಂದ ಮಾರ್ಚ್‌ ವರೆಗೆ ಒಟ್ಟು 42,575 ವಿಚ್ಛೇದನ ಪ್ರಕರಣ ದಾಖಲಾಗಿವೆ. ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, 2022ರಲ್ಲಿ ವಿಚ್ಛೇದನ 66,863 ರಷ್ಟಿತ್ತು, ಇದೀಗ ಒಟ್ಟು ಐದು ವರ್ಷದಲ್ಲಿ 1,95,216 ಪ್ರಕರಣ ದಾಖಲಾಗಿದೆ.

2022ರಲ್ಲಿ ಅತಿ ಹೆಚ್ಚು ಪ್ರಮಾಣದ ವಿಚ್ಛೇದನ ಪ್ರಕರಣಗಳು ದಾಖಲಾಗಿದ್ದು, ರಾಜ್ಯ ವಿಚ್ಛೇದನ ದರವು ಶೇ.17.96ರಷ್ಟಕ್ಕೆ ಏರಿಕೆಯಾಗಿತ್ತು. 2021ರಲ್ಲೂ ವಿಚ್ಚೇದನ ದರ ಏರಿಕೆ ಪ್ರಮಾಣದಲ್ಲಿಯೇ ಇತ್ತು. ಆದರೆ 2023 ಹಾಗೂ 2024ರಲ್ಲಿ ಹೆಚ್ಚು ಕಡಿಮೆ ಅದೇ ಪುನರಾವರ್ತನೆಯಾಗಿದೆ.

Comments are closed.