Free Spa and physical contact: ಹೋಟೆಲ್‌ನ ಡಿಸ್‌ಪ್ಲೇ ಬೋರ್ಡ್‌ನಲ್ಲಿ ‘ಉಚಿತ ಸ್ಪಾ ಮತ್ತು ಸಂಭೋಗ’ ಬರಹ; ವಿಡಿಯೋ ವೈರಲ್

Free Spa and physical contact: ರಾಜಸ್ಥಾನದ(Rajastan) ಉದಯಪುರದ ಹೋಟೆಲ್(Hotel) ಒಂದರ ಡಿಸ್‌ಪ್ಲೇ ಬೋರ್ಡ್‌ನಲ್ಲಿ ‘ಉಚಿತ ಸ್ವಾ ಮತ್ತುಸಂಭೋಗ ‘ ಎಂಬ ಬರಹ ಕಾಣಿಸಿದ್ದು, ಈ ವಿಡಿಯೋ ವೈರಲ್(Video Viral) ಆಗಿದೆ. ಸ್ಥಳೀಯ ಮಾಧ್ಯಮದ ವರದಿಗಾರ ಹೋಟೆಲ್ ಮಾಲೀಕನ ಬಳಿ ಈ ಬಗ್ಗೆ ಕೇಳಿದಾಗ, ಆರಂಭದಲ್ಲಿ “ಹೋಟೆಲ್‌ನ ಹೊರಗೆ ಇರುವ ಡಿಸ್‌ಪ್ಲೇ ಬೋರ್ಡ್ ನಮ್ಮದೇ” ಎಂದ ಮಾಲೀಕ, ಬರಹಗಳನ್ನು ನೋಡಿದ ಬಳಿಕ “ಇದು ಹೇಗೆ ಆಯ್ತು ಎಂಬುದು ನನಗೂ ಗೊತ್ತಿಲ್ಲ” ಎಂದಿದ್ದಾರೆ. ನಮ್ಮ ಹೋಟೆಲ್‌ನಲ್ಲಿ ಅಂತಹ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ ಎಂದು ಮಾಲೀಕರು ಹೇಳಿದ್ದಾರೆ.
उदयपुर में होटल वाले गजब ही कर रहे हैं…!#Rajasthan pic.twitter.com/7Ipd6rQY5q
— Avdhesh Pareek (@Zinda_Avdhesh) April 4, 2025
ಇದರಿಂದ ಬೆದರಿದ ಹೊಟೇಲ್ ಓನರ್, ನಮ್ಮ ಹೋಟೆಲ್ ಒಳಗೆ ಬಂದು ಎಲ್ಲಾ ರೂಮ್ಗಳನ್ನು ಚೆಕ್ ಮಾಡಿ, ಇಲ್ಲಿ ಈ ರೀತೀಯ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ ಎಂದಿದ್ದಾರೆ. ಸದ್ಯ ವರದಿಗಾರ ಹಾಗೂ ಹೋಟೆಲ್ ಮಾಲೀಕನ ನಡುವೆ ನಡೆದ ವಾಗ್ವಾದದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದ್ರೆ ಇದುವರೆಗೂ ಕೂಡ ಡಿಸ್ಪ್ಲೇನಲ್ಲಿ ಮೂಡಿ ಬಂದ ಅಕ್ಷರಗಳನ್ನು ಹೋಟೆಲ್ ಮಾಲೀಕನೇ ಹೇಳಿ ಬರೆಸಿದ್ದಾ ಅಥವಾ ಕಣ್ತಪ್ಪಿನಿಂದ ಆಗಿದ್ದಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇನ್ನು ವರದಿಗಾರ, ಹೋಟೆಲ್ ಹೆಸರಿನಲ್ಲಿ ನೀವು ಸ್ಪಾ ನಡೆಸುತ್ತಿದ್ದೀರಾ? ಎಂದಿದ್ದಕ್ಕೆ, ಇದು ಸ್ಪಾ ಅಲ್ಲ, ಸ್ಪಾವನ್ನು ಬೇರೆಯವರಿಗೆ ಗುತ್ತಿಗೆಯನ್ನು ಕೊಡಲಾಗಿದೆ ಎಂದು ಹೇಳಿದ್ದಾನೆ, ಅಲ್ಲದೇ ಮತ್ತೊಮ್ಮೆ, ನೀವು ಹೋಟೆಲ್ ಒಳಗೆ ಬಂದು ಚೆಕ್ ಮಾಡಿ ಇಂತಹ ಚಟುವಟಿಕೆಗಳು ನಡೆಯುತ್ತಿವೆಯಾ ಅನ್ನೋದನ್ನ ನೀವೆ ಸ್ಪಷ್ಟಪಡಿಸಿಕೊಳ್ಳಿ ಎಂದು ಪರಿ ಪರಿಯಾಗಿ ಬೇಡಿಕೊಂಡಿದ್ದಾನೆ.
Comments are closed.