Karnataka: ಸಿಇಟಿ 2025 ಪರೀಕ್ಷೆ ಹಾಲ್ ಟಿಕೆಟ್​ ಬಿಡುಗಡೆ

Share the Article

Karnataka: ಕರ್ನಾಟಕ (Karnataka) ಸಾಮಾನ್ಯ ಪ್ರವೇಶ ಪರೀಕ್ಷೆ 2025 ಸಿಇಟಿ ಪರೀಕ್ಷೆ ಹಾಲ್ ಟಿಕೆಟ್‌ ಭಾನುವಾರ ಬಿಡುಗಡೆಯಾಗಿದೆ. ಆನ್​ಲೈನ್​ನಲ್ಲಿ ಹಾಲ್ ಟಿಕೆಟ್ ಮತ್ತು ಮಾದರಿ OMR ಶೀಟ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಸಿಇಟಿ ಪ್ರವೇಶ ಪತ್ರ ಬಿಡುಗಡೆ ಮಾಡಲಾಗಿದ್ದು, ಅಭ್ಯರ್ಥಿಗಳು cetonline.karnataka.gov.in ಲಿಂಕ್ ಮೂಲಕ ಹಾಲ್ ಟಿಕೆಟ್​ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇನ್ನು ಪ್ರತಿ ಬಾರಿ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ದಿನ ಒಎಮ್​ಆರ್ ತುಂಬಲು ಪರದಾಟ ಹಾಗೂ ಗೊಂದಲ ಮಾಡಿಕೊಳ್ಳುತ್ತಿದ್ದ ಹಿನ್ನಲೆ ಈ ಬಾರಿ ಪ್ರವೇಶ ಪತ್ರದ ಜೊತೆಗೆ ಒಎಮ್​ಆರ್ ಶೀಟ್ ಕೂಡಾ ನೀಡಲಾಗುತ್ತಿದೆ.

ಏಪ್ರಿಲ್ 15 ರಿಂದ 17 ರವರೆಗೆ ನಡೆಯುವ ಪರೀಕ್ಷೆಗೆ 3.6 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.

Comments are closed.