AIIMS: ರಕ್ತ ಪರೀಕ್ಷೆಯಿಂದಲೇ ಗರ್ಭಕಂಠ ಕ್ಯಾನ್ಸರ್ ಪತ್ತೆ– ಏಮ್ಸ್ ಸಂಶೋಧಕರ ಹೊಸ ಪ್ರಯೋಗ

ನವದೆಹಲಿ: ಪ್ರತಿಷ್ಠಿತ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಸರ್ವಿಕಲ್ ಕ್ಯಾನ್ಸರ್ (ಗರ್ಭಕಂಠದ ಕ್ಯಾನ್ಸರ್) ಗುರುತಿಸುವಲ್ಲಿ ಒಂದು ಪ್ರಮುಖ ಸಂಶೋಧನೆಯನ್ನು ನಡೆಸಿದೆ. ಈ ಅಧ್ಯಯನದ ಪ್ರಕಾರ, ರಕ್ತ ಪರೀಕ್ಷೆಯ ಮೂಲಕ ಸರ್ವಿಕಲ್ ಕ್ಯಾನ್ಸರ್ (Cervical Cancer) ನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಬಹುದಾಗಿದೆ.ಎಂದು ಏಮ್ಸ್ ಹೇಳಿದೆ. ಈ ಆವಿಷ್ಕಾರವು ಮಹಿಳಾ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಲ್ಲುದು ಎಂದು ಅಭಿಪ್ರಾಯಪಡಲಾಗಿದೆ.

ಈ ರಕ್ತ ಪರೀಕ್ಷೆಯು ಕ್ಯಾನ್ಸರ್‌ಗೆ ಸಂಬಂಧಿಸಿದ ನಿರ್ದಿಷ್ಟ ಜೈವಿಕ ಗುರುತುಗಳನ್ನು (ಬಯೋ ಮಾರ್ಕರ್‌ಗಳನ್ನು) ಪತ್ತೆ ಮಾಡುತ್ತದೆಯಂತೆ. ಒಟ್ಟಾರೆ ಪತ್ತೆ ವಿಧಾನವು ತುಂಬಾ ಸರಳ ಅಲ್ಲದೆ ಅತ್ಯಂತ ಕಡಿಮೆ ವೆಚ್ಚದ ಜತೆಗೆ ಆಕ್ರಮಣಕಾರಿ ಅಲ್ಲದ ಪರೀಕ್ಷೆಯಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಸಹ ಇದನ್ನು ಮಾಡಬಹುದಾಗಿದೆ.

ಸಾಂಪ್ರದಾಯಿಕವಾಗಿ ಗರ್ಭಕಂಠದ ಕ್ಯಾನ್ಸರ್ ಪತ್ತೆಗೆ ಸದ್ಯ ಪ್ಯಾಪ್ ಸ್ಮಿಯರ್ ಮತ್ತು ಎಚ್‌ಪಿವಿ ಪರೀಕ್ಷೆಗಳನ್ನು ಬಳಸಲಾಗುತ್ತಿದ್ದು, ಈ ಉದ್ದೇಶಿತ ರಕ್ತ ಪರೀಕ್ಷೆಯು ಇನ್ನಷ್ಟು ನಿಖರವಾದ ಫಲಿತಾಂಶಗಳನ್ನು ನೀಡುವ ಸಾಧ್ಯತೆಯಿದೆ. ಈ ಸಂಶೋಧನೆಯು ಗರ್ಭಕಂಠದ ಕ್ಯಾನ್ಸರ್‌ನ ಆರಂಭಿಕ ರೋಗನಿರ್ಣಯಕ್ಕೆ ದೊಡ್ಡ ಆಶಾಕಿರಣ ಆಗಲಿದ್ದು ಸರ್ವೈಕಲ್ ಕ್ಯಾನ್ಸರ್ ನಿಂದ ಮರಣಿಸುವ ಮಹಿಳೆಯರ ಆರೋಗ್ಯ ಸುಧಾರಿಸುವ ಮಹತ್ತ ಪಾತ್ರ ವಹಿಸಲಿದೆ ಈ ಸಂಶೋಧನೆ.

Comments are closed.