Mangalore: ನಟ ರಿಷಬ್‌ ಶೆಟ್ಟಿ ರಾತ್ರೋರಾತ್ರಿ ದೈವದ ಮೊರೆ; ಪಂಜುರ್ಲಿ ಕೊಟ್ಟ ವಾರ್ನಿಂಗ್‌ ಏನು?

Share the Article

Mangalore: ನಟ ರಿಷಬ್‌ ಶೆಟ್ಟಿ ರಾತ್ರೋರಾತ್ರಿ ದೈವದ ಮೊರೆ ಹೋಗಿದ್ದಾರೆ. ಜಗತ್ತಿನೆಲ್ಲೆಡೆ ನಿನಗೆ ಶತ್ರುಗಳ ಸಂಖ್ಯೆ ಹೆಚ್ಚಿದೆ. ನಿನ್ನ ಸಂಸಾರ ಹಾಳು ಮಾಡಲು ಯತ್ನ ಮಾಡುತ್ತಿದ್ದಾರೆ ಎಂದು ಪಂಜುರ್ಲಿ ದೈವ ಎಚ್ಚರಿಕೆ ನೀಡಿದೆ.

ಮಂಗಳೂರಿನ ಕದ್ರಿ ಬಾರೆಬೈಲ್‌ ವಾರಾಹ ಪಂಜುರ್ಲಿ, ಜಾರಂದಾಯ ದೈವದ ವಾರ್ಷಿಕ ಉತ್ಸವದಲ್ಲಿ ಕುಟುಂಬ ಸಮೇತರಾಗಿ ಭಾಗಿಯಾಗಿದ್ದಾರೆ.

ರಿಷಬ್‌ ಶೆಟ್ಟಿ ದೈವದ ಬಳಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದು, ನಿನಗೆ ಜಗತ್ತಿನೆಲ್ಲೆಡೆ ಶತ್ರುಗಳು ಹೆಚ್ಚಾಗಿದ್ದಾರೆ. ನಿನ್ನ ಸಂಸಾರ ಹಾಳು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ನನಗೆ ಸೇವೆ ನೀಡುವ ಹರಕೆ ಹೇಳಿಕೋ. ಮುಂದಿನ ಐದು ತಿಂಗಳ ಗಡುವಲ್ಲಿ ಒಳ್ಳೆಯದು ಮಾಡುತ್ತೇನೆ ಎನ್ನುವ ಅಭಯವನ್ನು ದೈವ ನೀಡಿದೆ.

Comments are closed.