Canara Bank: ದೇವಾಲಯದ ಕಾಣಿಕೆ ಹುಂಡಿ ಎಣಿಕೆ ವೇಳೆ 10 ಲಕ್ಷ ರೂ. ಕದ್ದ ಕೆನರಾ ಬ್ಯಾಂಕ್‌ ಅಧಿಕಾರಿ!

Canara Bank: ಉತ್ತರ ಪ್ರದೇಶದ ವೃಂದಾವನದಲ್ಲಿರು ಬಂಕೆ ಬಿಹಾರಿ ದೇವಾಲಯದ ಕಾಣಿಕೆ ಡಬ್ಬಿಗಳಿಂದ 10 ಲಕ್ಷ ರೂ. ಕದ್ದ ಆರೋಪದಲ್ಲಿ ಕೆನರಾ ಬ್ಯಾಂಕ್‌ ಅಧಿಕಾರಿಯನ್ನು ಶನಿವಾರ ಬಂಧನ ಮಾಡಲಾಗಿದೆ.

ನಗದು ಬಂಡಲ್‌ಗಳನ್ನು ತನ್ನ ಬಟ್ಟೆಯಲ್ಲಿ ಬಚ್ಚಿಟ್ಟಿದ್ದ ಈತನ ಕೃತ್ಯ ಸಿಸಿಟಿವಿ ದೃಶ್ಯದಲ್ಲಿ ಬಯಲಾಗಿದೆ.

ಉತ್ತರಪ್ರದೇಶದ ರಾಂಪುರದ ನಿವಾಸಿ ಅಭಿನವ್‌ ಸಕ್ಸೇನಾ ಆರೋಪಿ. ಈತನನ್ನು ರೆಡ್‌ಹ್ಯಾಂಡಾಗಿ ಬಂಧನ ಮಾಡಲಾಗಿದೆ. ಎಣಿಕೆಯ ಸಮಯದಲ್ಲಿ ದೇವಾಲಯದ ಭದ್ರತಾ ತಂಡವು ಕೆನರಾ ಬ್ಯಾಂಕಿನ ಮಥುರಾ ಶಾಖೆಯ ಅಧಿಕಾರಿ 500 ರೂ, 200 ರೂ. ಬಂಡಲ್‌ಗಳನ್ನು ಬಚ್ಚಿಟ್ಟಿದ್ದು, ನಂತರ ಅವರು ಪೊಲೀಸರಿಗೆ ಕರೆ ಮಾಡಿದ್ದು, ಸಾಕ್ಷಿಗಳ ಮುಂದೆ ಆರೋಪಿಯನ್ನು ತಪಾಸಣೆ ಮಾಡಿದಾಗ ರೂ.1,28,600 ರೂ. ವಶಪಡಿಸಿಕೊಳ್ಳಲಾಗಿದೆ.

ಸಕ್ಸೇನಾ ಅವರು ತನಿಖೆ ವೇಳೆ ಹಣ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಯ ಬಂಧನ ಮಾಡಿ, ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಲಾಯಿತು. ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

Comments are closed.