Sullia: ಚಲಿಸುತ್ತಿರುವ ಕಾರಿನಿಂದ ಹೊರಗೆ ಬಂದು ಯುವಕರ ಡ್ಯಾನ್ಸ್‌, ಪ್ರಕರಣ ದಾಖಲು!

Sullia: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಸಂಪಾಜಿ-ಸುಳ್ಯ ರಸ್ತೆಯಲ್ಲಿ ಏಳು ಜನ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದು, ಸನ್‌ರೂಫ್‌ ಮತ್ತು ಕಾರಿನ ಕಿಟಕಿ ಮೂಲಕ ಐದು ಜನ ಹೊರಬಂದು ಡ್ಯಾನ್ಸ್‌ ಮಾಡುತ್ತಿದ್ದ ವಿಡಿಯೋ ವೈರಲ್‌ ಆಗಿದೆ.

ಕಾರನ್ನು ಅತಿವೇಗವಾಗಿ ಚಲಾಯಿಸಿಕೊಂಡು ಹೋಗುತ್ತಾ ಯುವಕರು ತಮ್ಮ ಪುಂಡಾಟ ಮೆರೆದಿದ್ದಾರೆ. ಈ ಘಟನೆ ಕುರಿತು ಸುಳ್ಯ ಪೊಲೀಸ್‌ ಠಾಣೆಯಲ್ಲಿ FIR ದಾಖಲಾಗಿದೆ. ಬಿಎನ್‌ಎಸ್‌ ಆಕ್ಟ್‌ 281 IMV ಆಕ್ಟ್‌ನ 184 ಸೆಕ್ಷನ್‌ ಅಡಿ ಪ್ರಕರಣ ದಾಖಲಾಗಿದ್ದು, ಸುಮೊಟೋ ಪ್ರಕರಣ ದಾಖಲು ಮಾಡಲಾಗಿದೆ.

Comments are closed.