Chikkamangluru: ಚಿಕ್ಕಮಗಳೂರು: ಮನೆ ಮೇಲೆ ಮರ ಬಿದ್ದು ಹಾನಿ

Chikkamangluru: ಚಿಕ್ಕಮಂಗಳೂರು (Chikkamangluru) ಕಳಸ ತಾಲೂಕಿನ ಇಡಕಣಿ ಗ್ರಾಮ ಪಂಚಾಯತ್ ಗೆ ಸೇರುವ ಮನೆಯೊಂದರ ಮೇಲೆ ಮಳೆಯಿಂದಾಗಿ ಮರ ಬಿದ್ದು ಹಾನಿಯಾದ ಘಟನೆ ಎ.5 ರಂದು ನಡೆದಿದೆ.
ಹೆಮ್ಮಕ್ಕಿ ಗ್ರಾಮದ ಎಳ್ಳುಕುಡಿಗೆ ಸುಂದರಿ ಎಂಬುವರಿಗೆ ಸೇರಿದ ಮನೆಯಾಗಿದೆ. ಜೋರಾಗಿ ಬೀಸಿದ ಗಾಳಿಗೆ ಹಳುವಳ್ಳಿ ಹೊರನಾಡು ಮದ್ಯೆ ವಿದ್ಯುತ್ ತಂತಿ ಮೇಲೆ ಅಡಕೆ ಮರವೊಂದು ಬಿದ್ದು ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು.
Comments are closed.