Social media: 13 ವರ್ಷಕ್ಕಿಂತ ಕೆಳಗಿನ ಮಕ್ಕಳು ಸಾಮಾಜಿಕ ಮಾಧ್ಯಮ ಬಳಸುವುದನ್ನು ನಿರ್ಬಂಧಿಸುವ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್!

Social media: ಸುಪ್ರೀಂ ಕೋರ್ಟ್ 13 ವರ್ಷಕ್ಕಿಂತ ಕೆಳಗಿನ ಮಕ್ಕಳು ಸಾಮಾಜಿಕ ಮಾಧ್ಯಮಗಳನ್ನು (Social media) ಬಳಸುವುದನ್ನು ನಿರ್ಬಂಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿ ‘ಈ ಸಂಬಂಧ ಕಾನುನು ಜಾರಿಗೆ ತರುವಂತೆ ಸಂಸತ್ತನ್ನು ಕೋರಿಕೊಳ್ಳಿ’ ಎಂದು ಅರ್ಜಿದಾರರಿಗೆ ಸೂಚನೆ ನೀಡಿದೆ.

ಮೋಜಿನಿ ಪ್ರಿಯಾ ಎಂಬ ವಕೀಲೆ ಜೆಪ್ಟ್ ಫೌಂಡೇಶನ್ ಪರವಾಗಿ ಈ ಅರ್ಜಿ ಸಲ್ಲಿಸಿದ್ದು ಅದರಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆಯಿಂದ ಎಳೆ ಮನಸ್ಸುಗಳ ಮೇಲಾಗುವ ದೈಹಿಕ, ಮಾನಸಿಕ ಪರಿಣಾಮವನ್ನು ಉಲ್ಲೇಖಿಸಿ 13ರಿಂದ 18 ವರ್ಷದ ಮಕ್ಕಳು ಅವುಗಳನ್ನು ಬಳಸುವುದನ್ನು ನಿಯಂತ್ರಿಸಲು ವಯಸ್ಸು ಪರಿಶೀಲನೆ, ಬಯೋಮೆಟ್ರಿಕ್ ಧೃಡೀಕರಣವನ್ನು ಕಡ್ಡಾಯಗೊಳಿಸಬೇಕು ಎಂದು ಕೋರಲಾಗಿತ್ತು. ಅಂತೆಯೇ, ಮಕ್ಕಳ ಸುರಕ್ಷತಾ ನಿಯಮಗಳನ್ನು ಪಾಲಿಸದ ಸಾಮಾಜಿಕ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಮನವಿ ಮಾಡಲಾಗಿತ್ತು.
ಆದ್ರೆ ಬಿ.ಆರ್. ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಾಶಿ, ಈ ಅರ್ಜಿಗೆ ಪ್ರತಿಕ್ರಿಯಿಸಿ ‘ಇದು ಕಾನೂನಿನ ವ್ಯಾಪ್ತಿಗೆ ಒಳಪಡುತ್ತದೆ. ಈ ಬಗ್ಗೆ ಸಂಬಂಧಿಸಿದವರ ಎದುರು ಪ್ರಸ್ತಾಪಿಸಿ. ಅವರು ಅದನ್ನು 8 ವಾರಗಳೊಳಗಾಗಿ ಪರಿಗಣಿಸಬೇಕು’ ಎಂದು ಆದೇಶ ನೀಡಿದ್ದಾರೆ.
Comments are closed.