Belthangady: ಅತಿದೊಡ್ಡ ಹೂವಿನ ರಂಗೋಲಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸ್ಥಾನ!

Belthangady: ಬೆಳ್ತಂಗಡಿ (Belthangady) ತಾಲೂಕಿನ ಲಾಯಿಲಾ ಗ್ರಾಮದ ಎಣಿಂಜೆಯ ಬಾಲಕಿ ಶ್ರದ್ಧಾ ಶೆಟ್ಟಿ ಹೂವಿನಿಂದ ಮಾಡಿದ ರಂಗೋಲಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಲಭಿಸಿದೆ.
ಈ ಅತಿ ದೊಡ್ಡ ರಂಗೋಲಿಯನು ಕೆಂಗುಲಾಬಿ, ಮಲ್ಲಿಗೆ, ಕೇಸರಿ ಹಾಗೂ ಹಳದಿ ಬಣ್ಣದ ಚೆಂಡು ಹೂ ಸೇರಿದಂತೆ ವಿವಿಧ ಬಣ್ಣಗಳ ಹೂಗಳನ್ನು ಬಳಸಿ ರಂಗೋಲಿ ರಚಿಸಲಾಗಿತ್ತು. ಈ ರಂಗೋಲಿ 8 ಫೀಟ್ ಅಗಲದಲ್ಲಿದ್ದು ಸುಮಾರು 1 ಗಂಟೆ 40 ನಿಮಿಷದಲ್ಲಿ ರಚಿಸಲಾಗಿದೆ.
ಇಂಡಿಯಾ ಬುಕ್ ಆಫ್ ಕಾರ್ಡ್ಸ್ ನಲ್ಲಿ ಅತೀ ದೊಡ್ಡ ಹೂವಿನ ರಂಗೋಲಿ ಎಂದು ಸೇರ್ಪಡೆಯಾಗಿರುವ ವಿಚಾರ 2025ರ ಫೆಬ್ರವರಿ 3ರಂದೇ ದೃಢಪಟ್ಟಿತ್ತು, ಆದರೆ ಸರ್ಟಿಫಿಕೇಟ್ ಅಧಿಕೃತವಾಗಿ ಎಪ್ರಿಲ್ 4 ರಂದು ಶ್ರದ್ಧಾ ಶೆಟ್ಟಿ ಕೈ ಸೇರಿದ ಕಾರಣ ಕುಟುಂಬ ಸಂತಸ ಹಂಚಿಕೊಂಡಿದೆ.
Comments are closed.