Doctor: ಫಾರಿನ್ ರಿಟರ್ನ್ಸ್ ನಕಲಿ ಡಾಕ್ಟರ್: ಆಪರೇಷನ್‌ಗೆ 7 ಬಲಿ!

Doctor: ನಕಲಿ ವೈದ್ಯನೊಬ್ಬ (Doctor) ಹೃದಯ ಶಸ್ತ್ರಚಿಕಿತ್ಸೆ ಸೇರಿದಂತೆ ಹಲವು ಚಿಕಿತ್ಸೆ ನೀಡಿದ ಪರಿಣಾಮ ಏಳು ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ದಾಮೋಹ್ ನಲ್ಲಿ ನಡೆದಿದೆ.

ನಾನು ಬ್ರಿಟನ್ ನಿಂದ ಬಂದಿದ್ದೇನೆ ಎಂದು ಪೋಸು ಕೊಡುತ್ತಿದ್ದ ನರೇಂದ್ರ ವಿಕ್ರಮಾದಿತ್ಯ ಯಾದವ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕ್ರಿಶ್ಚಿಯನ್ ಮಿಷನರಿ ಆಸ್ಪತ್ರೆಯಲ್ಲಿ ಹೃದ್ರೋಗ ವಿಭಾಗದಲ್ಲಿ ಡಾ. ಜಾನ್ ಕೆಮ್ ಎಂಬ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದ ಈತ ತಾನೊಬ್ಬ ಹೆಸರಾಂತ ಹೃದಯ ತಜ್ಞ ವೈದ್ಯ ಎಂದು ಹೇಳಿಕೊಂಡಿದ್ದ. ಆದರೆ ಒಂದು ತಿಂಗಳಲ್ಲೇ ಪದೇ ಪದೇ ಸಾವು ಸಂಭವಿಸಿದ ಬಳಿಕ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿತ್ತು. ಅದಲ್ಲದೆ ಹಲವು ರೋಗಿಗಳು ಸಾಯದಿದ್ದರೂ ಈತನಿಂದ ಶಸ್ತ್ರಚಿಕಿತ್ಸೆಗೊಳಗಾದ ಬಳಿಕ ತಮ್ಮ ರೋಗ ಯಾತನೆ ಹೆಚ್ಚಾಗಿರುವುದಾಗಿ ಹೇಳಿಕೊಂಡಿದ್ದರು.

Comments are closed.