Bhuvaneshwara: ಪತ್ನಿಯಿಂದ ಮಾನಸಿಕ ಹಿಂಸೆ; ರೈಲಿನ ಮುಂದೆ ಹಾರಿದ ಪತಿ!

Bhuvaneshwara: ಪತ್ನಿ ಮಾನಸಿಕ ಹಿಂಸೆ ನೀಡುತ್ತಿದ್ದಾಳೆ ಎಂದು ಆರೋಪ ಮಾಡಿದ ವ್ಯಕ್ತಿಯೋರ್ವ ರೈಲಿನ ಮುಂದೆ ಹಾರಿ ತನ್ನ ಪ್ರಾಣ ಕಳೆದುಕೊಂಡ ಘಟನೆ ಒಡಿಶಾದ ಖೋರ್ಧಾ ಜಿಲ್ಲೆಯಲ್ಲಿ ಶನಿವಾರ (ಎ.5) ನಡೆದಿದೆ.
ರಾಮಚಂದ್ರ ಸಾವಿಗೀಡಾದ ವ್ಯಕ್ತಿ.
ಸಾವಿಗೂ ಮುನ್ನ ರಾಮಚಂದ್ರ ವಿಡಿಯೋ ಮಾಡಿದ್ದು, ಪತ್ನಿ ರೂಪಾಲಿ ಮಾನಸಿಕವಾಗಿ ಕಿರುಕುಳ ನೀಡಿದ್ದಾಳೆ ಎನ್ನುವ ಆರೋಪ ಮಾಡಿದ್ದಾನೆ. ಈ ರೀತಿಯ ಹೆಜ್ಜೆ ಇಡಲು ಆಕೆಯೇ ಕಾರಣ ಎಂದು ಹೇಳಿದ್ದಾನೆ. ಎರಡು ವರ್ಷಗಳ ಹಿಂದೆ ರಾಮಚಂದ್ರ ರೂಪಾಲಿ ಮದುವೆಯಾಗಿದ್ದು, ಇವರಿಗೆ ಹೆಣ್ಣು ಮಗುವೊಂದು ಇದೆ.
ರೂಪಾಲಿ ಯಾವಾಗಲು ತನ್ನ ತಾಯಿ ಮನೆಯಲ್ಲಿ ಇರುತ್ತಿದ್ದಳು. ರಾಮಚಂದ್ರ ರೂಪಾಲಿಯ ತಾಯಿ ಮನೆಗೆ ಭೇಟಿ ನೀಡದ್ದಕ್ಕೆ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಳು. ಮದುವೆಯ ಸಂಪೂರ್ಣ ಖರ್ಚನ್ನು ತನ್ನ ಕುಟುಂಬವೇ ಭರಿಸಿದ್ದು, ವಧುವಿನ ಕುಟುಂಬಕ್ಕೆ 20 ಲಕ್ಷ ರೂ ನೀಡಿರುವುದಾಗಿ ರಾಮಚಂದ್ರ ಅವರ ತಾಯಿ ಆರೋಪಿಸಿ ದೂರನ್ನು ನೀಡಿದ್ದಾರೆ.
Comments are closed.