Kerala: ಟಾರ್ಗೆಟ್ ರೀಚ್ ಮಾಡದ ಸಿಬ್ಬಂದಿಯನ್ನು ನಾಯಿಯಂತೆ ಕಾಣುವ ಆಫೀಸ್!

Kerala: ಕೇರಳದ ಕೊಚ್ಚಿಯಲ್ಲಿರುವ ಹಿಂದೂಸ್ತಾನ್ ಪವರ್ ಲಿಂಕ್ಸ್ ಎಂಬ ಕಂಪನಿಯು ತನ್ನ ಸಿಬ್ಬಂದಿಯನ್ನು ನಾಯಿಗಿಂತ ಕಡೆಯಾಗಿ ನಡೆಸಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ. ನಾಯಿ ರೀತಿ ವರ್ತನೆ ಮಾಡುವುದು ಮಾತ್ರವಲ್ಲದೇ, ಸಿಬ್ಬಂದಿ ಕುತ್ತಿಗೆಗೆ ಸರಪಳಿ ಕಟ್ಟಿ ನಾಯಿ ರೀತಿ ನಡೆಯುವುದು, ಪರಸ್ಪರ ಗುಪ್ತಾಂಗವನ್ನು ಹಿಡಿಯುವುದು, ನಾಯಿ ರೀತಿ ತಿನ್ನುವುದು ಈ ರೀತಿಯ ಕ್ರೂರ ಶಿಕ್ಷೆಯನ್ನು ಸಿಬ್ಬಂದಿಗೆ ನೀಡಲಾಗುತ್ತಿದೆ.
#numberoneKerala employees of Hindustan Power link made to walk like dogs and made to lick coin from the floor with belt on neck for not achieving target@sambitswaraj @amitmalviya @AmitShah pic.twitter.com/WkuoqDeuQ5
— pParambathp (@PParandy) April 5, 2025
ಇವರೆಲ್ಲರೂ ಮಾರ್ಕೆಟಿಂಗ್ ಉದ್ಯೋಗಿಗಳು. ಮನೆ ಮನೆಗಳಿಗೆ ಹೋಗಿ ಕಂಪನಿಯ ಉತ್ಪನ್ನಗಳನ್ನು ಮಾರಾಟ ಮಾಡುವ ಕೆಲಸವನ್ನು ಹೊಂದಿದ್ದಾರೆ. ಟಾರ್ಗೆಟ್ ರೀಚ್ ಆಗಲು ವಿಫಲರಾದವರಿಗೆ ಇಂತಹ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಇವರೆಲ್ಲರಿಗೂ ಮಾಸಿಕ ರೂ.10 ಸಾವಿರಕ್ಕಿಂತಲೂ ಕಡಿಮೆ ಸಂಬಂಳವಿದೆ.
ವಿಡಿಯೋ ವೈರಲ್ ಬೆನ್ನಲ್ಲೇ ಕೇರಳ ಕಾರ್ಮಿಕ ಸಚಿವ ವಿ.ಶಿವನ್‌ಕುಟ್ಟಿ ತಕ್ಷಣವೇ ತನಿಖೆಗೆ ಆದೇಶಿಸಿದ್ದು, ಕಂಪನಿಯ ಮಾಲೀಕನನ್ನು ಈ ಹಿಂದೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧನ ಮಾಡಲಾಗಿತ್ತು ಎನ್ನುವ ವಿಚಾರ ಬೆಳಕಿಗೆ ಬಂದಿದೆ.
Comments are closed.