Yadagiri: 26ನೇ ವಯಸ್ಸಿನಲ್ಲಿಯೇ ಸನ್ಯಾಸತ್ವಕ್ಕೆ ಯುವತಿ ಪಾದಾರ್ಪಣೆ!

Yadagiri: ನಗರದ ಜೈನ್ ಬಡಾವಣೆಯ ನಿವಾಸಿ, ಕೋಟ್ಯಾಧಿಪತಿಯ ಪುತ್ರಿ ನಿಖಿತಾ (26) ಐಷರಾಮಿ ಜೀವನ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಲು ಮುಂದಾಗಿರುವ ಘಟನೆ ನಡೆದಿದೆ.
ಜೈನ್ ಬಡಾವಣೆಯ ನರೇಂದ್ರ ಗಾಂಧಿ ಹಾಗೂ ಸಂಗೀತಾ ಗಾಂಧಿ ದಂಪತಿಗಳ ಪುತ್ರಿ ನಿಖಿತಾ ಜೈನ ಸನ್ಯಾಸತ್ವ ಸ್ವೀಕರಿಸಿ, ಜೈನ ಧರ್ಮದ ಸೇವೆಗೆ ಮುಂದಾಗಿದ್ದಾಳೆ.
ನರೇಂದ್ರ ಗಾಂಧಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಪುತ್ರನಿದ್ದು, ಏಳು ವರ್ಷದಿಂದ ಸನ್ಯಾಸಿ ಆಗಬೇಕೆಂದ ಬಯಸಿದ್ದ ನಿಖಿತಾ ಜೈನ ಧರ್ಮದ ಸೇವೆಗೆ ಅಣಿಯಾಗಿದ್ದು, ತನ್ನ ಆಸೆಯನ್ನು ಪೂರೈಸಿಕೊಂಡಿದ್ದಾಳೆ.
Comments are closed.