Mysore: ಸರಕಾರಿ ವಾಹನದಲ್ಲಿ ಕುಳಿತು ಗನ್‌ ಹಿಡಿದು ಫೋಸ್‌ ಕೊಟ್ಟ ಯುವಕ!

Mysore: ಮೈಸೂರಿನಲ್ಲಿ ಯುವಕನೋರ್ವ ಸರಕಾರಿ ವಾಹನದಲ್ಲಿ ಗನ್‌ ಹಿಡಿದು ಪೋಸ್‌ ಕೊಟ್ಟು ವೀಡಿಯೋ ಮಾಡಿರುವ ಘಟನೆ ನಡೆದಿದೆ.

ಸರಕಾರಿ ವಾಹನದಲ್ಲಿ ಕುಳಿತು ಗನ್‌ ಹಿಡಿದು ಪೋಸ್‌ ಕೊಟ್ಟಿದ್ದಾನೆ. ಇದು ವೈರಲ್‌ ಆಗಿದೆ. ಮೈಸೂರಿನ ಕೆ.ಟಿ.ಬಡಾವಣೆಯ ಯುವಕನಾಗಿದ್ದು, ಜ್ಯುವೆಲ್ಲರಿ ಶಾಪ್‌ ಮಾಲಿಕರ ಮಗ ಎಂದು ತಿಳಿದು ಬಂದಿದೆ.

ವರ್ಷದ ಹಿಂದೆ ಮಾಡಿದ ರೀಲ್ಸ್‌ ಇದು ಎಂದು ಹೇಳಲಾಗಿದೆ. ಗನ್‌ ಹಿಡಿದು ಸರಕಾರಿ ವಾಹನದಲ್ಲಿ ಕುಳಿತುಕೊಳ್ಳುತ್ತಿರುವ ಯುವಕನ ವಿಡಿಯೋ ವೈರಲ್‌ ಆಗಿದೆ. ಯುವಕನಿಗೆ ರೀಲ್ಸ್‌ಗಾಗಿ ಸರಕಾರಿ ವಾಹನ ಕೊಟ್ಟಿದ್ದು ಯಾರು? ಎನ್ನುವ ಪ್ರಶ್ನೆ ಇದೆ.

ಸರಸ್ವತಿಪುರಂ ಠಾಣೆ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Comments are closed.