Belagavi: ಗಂಡನ ಹತ್ಯೆಯನ್ನು ವಿಡಿಯೋ ಕಾಲ್‌ ಮೂಲಕ ನೋಡಿದ ಪತ್ನಿ ಜೈಲುಪಾಲು!

Belagavi: ವಿಡಿಯೋ ಕಾಲ್‌ ಮಾಡಿ ಗಂಡನ ಹತ್ಯೆಯನ್ನು ಕಣ್ಣಾರೆ ಕಂಡಿದ್ದ ಪತ್ನಿಯನ್ನು ಖಾನಾಪುರ ಪೊಲೀಸರು ಬಂಧನ ಮಾಡಿದ್ದಾರೆ.

ಬೆಳಗಾವಿಯ ಶಿವನಗೌಡ ಪಾಟೀಲ್‌ ಎಂಬಾತನ ಕೊಲೆ ನಡೆದಿತ್ತು. ಕೊಲೆಯಾದ ಶಿವನಗೌಡ ಪತ್ನಿ ಶೈಲಾ ಪಾಟೀಲ್‌ ಹಾಗೂ ಕೊಲೆ ಆರೋಪಿ ರುದ್ರಪ್ಪ ಹೊಸಟ್ಟಿ ಜೊತೆಗೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಈ ವಿಷಯ ಗಂಡನಿಗೆ ಗೊತ್ತಾಗಿ ಈ ಕಾರಣಕ್ಕೆ ಆತನ ಸಹವಾಸ ಬಿಡು ಎಂದು ಶಿವನಗೌಡ ಪತ್ನಿಗೆ ಬುದ್ಧಿ ಹೇಳಿದ್ದನು.

ತವರು ಮನೆಗೆ ತನ್ನ ಪತ್ನಿಯನ್ನು ಬಿಟ್ಟು ಮನೆಗೆ ವಾಪಾಸು ಆಗುವಾಗ, ರುದ್ರಪ್ಪ ಎಣ್ಣೆ ಪಾರ್ಟಿ ಮಾಡಿಸಿ ಶಿವನಗೌಡರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ. ಇದನ್ನು ಪತ್ನಿ ಶೈಲಾ ವಿಡಿಯೋಕಾಲ್‌ ಮೂಲಕ ನೋಡಿದ್ದಳು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಆಕೆಯ ಕಾಲ್‌ ಹಿಸ್ಟರಿಯಲ್ಲಿ ಅನೈತಿಕ ಸಂಬಂಧಗಳು ಪತ್ತೆಯಾಗಿತ್ತು. ಈ ಕುರಿತು ಖಾನಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿ ಪತ್ನಿ, ಆಕೆಯ ಪ್ರಿಯಕರನನ್ನು ಬಂಧನ ಮಾಡಿ ತನಿಖೆ ಮಾಡುತ್ತಿದ್ದಾರೆ.

Comments are closed.