Davanagere: ಪೊಲೀಸ್‌ ಮನೆಗೇ ಕನ್ನ ಹಾಕಿ ನಗ, ನದು ದೋಚಿದ ಕಳ್ಳರು!

Share the Article

Davanagere: ಪೊಲೀಸ್‌ ಹೆಡ್‌ಕಾನ್ಸ್ಟೇಬಲ್‌ ಮನೆಗೇ ಕಳ್ಳರು ನುಗ್ಗಿ ನಗ, ನಗದು ದೋಚಿರುವ ಘಟನೆ ನಡೆದಿದೆ.

ದಾವಣಗೆರೆ ಜಿಲ್ಲೆ ಹರಿಹರದ ವಿದ್ಯಾನಗರದಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಹರಿಹರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆ ಬಡಾವಣೆ ಪೊಲೀಸ್‌ ಠಾಣೆಯ ಹೆಡ್‌ಕಾನ್ಸ್ಟೇಬಲ್‌ ಜಯನಾಯ್ಕ್‌, ಎಸ್‌.ಎಲ್‌. ಅವರ ಮನೆಯಲ್ಲಿ ಕಳ್ಳತನ ನಡೆದಿದೆ. 4.80 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, 5 ಸಾವಿರ ರೂಪಾಯಿ ನಗದು ಕಳವು ಆಗಿದೆ.

ಕುಟುಂಬದ ಮಂದಿಯೆಲ್ಲ ಯುಗಾದಿ ಹಬ್ಬ ಇದ್ದಿದ್ದುರಿಂದ ಮಾ.29 ರಂದು ಊರಿಗೆ ಹೋಗಿದ್ದು, ಜಯನಾಯ್ಕ್‌ ಮನೆಗೆ ಬೀಗ ಹಾಕಿ ರಾತ್ರಿ ಪಾಳಿಯ ಕೆಲಸಕ್ಕೆಂದು ಹೋಗಿದ್ದರು. ಆದರೆ ಮರುದಿನ ಬೆಳಗ್ಗೆ 9.30 ಕ್ಕೆ ಮನೆಗೆ ಬಂದು ನೋಡಿದಾಗ ಗೇಟ್‌ ಹಾಗೂ ಬಾಗಿಲಿನ ಇಂಟರ್ಲಾಕ್‌ ಒಡೆದು ಕಳವು ಮಾಡಿರುವುದು ಗಮನಕ್ಕೆ ಬಂದಿದೆ.

60.5 ಗ್ರಾಂ ತೂಕದ ಚಿನ್ನದ ಸರ, ಉಂಗುರ, ಬ್ರಾಸ್ಲೈಟ್‌, ಕಿವಿ ಓಲೆ ಸೇರಿ ಒಡವೆ ಮತ್ತು ನಗದು ಕಳವು ಆಗಿರುವ ಕುರಿತು ವರದಿಯಾಗಿದೆ.

Comments are closed.